ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ–ಆರ್‌ಎಸ್‌ಎಸ್ ಸಂಬಂಧ ಎಂತದು?ಸಿದ್ದರಾಮಯ್ಯ ಪ್ರಶ್ನೆಗೆ ಸಿಸಿ ಪಾಟೀಲ್ ಉತ್ತರ

Last Updated 29 ಸೆಪ್ಟೆಂಬರ್ 2021, 12:21 IST
ಅಕ್ಷರ ಗಾತ್ರ

ಬೆಂಗಳೂರು:‘ನಮಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ತಂದೆ–ತಾಯಿ ಇದ್ದ ಹಾಗೆ. ಜನಪರ ಚಿಂತನೆ, ಆಡಳಿತದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಬಿಜೆಪಿ ಹೇಳಿಕೊಟ್ಟಿದ್ದರೆ, ಆರ್‌ಎಸ್‌ಎಸ್‌ ನಮಗೆ ದೇಶಭಕ್ತಿ, ಸಾಮಾಜಿಕ ಸೇವೆಯಂತಹ ಉದಾತ್ತ ಗುಣಗಳನ್ನು ಹೇಳಿ ಕೊಟ್ಟಿದೆ’ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದ್ದಾರೆ.

ಪತ್ರಿಕಾಹೇಳಿಕೆ ನೀಡಿರುವ ಅವರು,‘ಒಬ್ಬ ವ್ಯಕ್ತಿಗೆ ಎರಡು ಕಣ್ಣುಗಳು ಹೇಗೆ ಮುಖ್ಯವೋ, ಹಾಗೆಯೇ ನಮಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಎರಡು ಕಣ್ಣುಗಳು ಇದ್ದ ಹಾಗೆ, ಆದ್ದರಿಂದ ನಮ್ಮ ತಂದೆ–ತಾಯಿಗಳಿಗೆ ಅವಹೇಳನ ಮಾಡುವವರ ಮುಂದೆ ನಾವು ಕೈಕಟ್ಟಿ ಕೂರುವುದಿಲ್ಲ’ಎಂದು ತಿಳಿಸಿದ್ದಾರೆ.

ಮಂಗಳವಾರ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ಬಿಜೆಪಿ–ಆರ್‌ಎಸ್‌ಎಸ್‌ ಸಂಬಂಧ ಎಂತಹದು? ಆರ್‌ಎಸ್‌ಎಸ್‌ ಹಾಗೂ ಬಿಜೆಪಿಗೆ ತಾಲಿಬಾನ್ ಪ್ರೇರಣೆಯೇ ಎಂದು ಕೆಣಕಿದ್ದರು.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT