ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ದ್ರೋಹ ಮಾಡಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಭೀಷ್ಮನಂತೆ ಶರಶಯ್ಯೆಯಲ್ಲಿ ಮಲಗಿರುವ ಬಿಎಸ್ವೈ ಅವರಿಗೆ ಬಿಜೆಪಿ ಚುಚ್ಚಿದ ದ್ರೋಹದ ಬಾಣಗಳು’ ಎಂಬ ಶೀರ್ಷಿಕೆಯಡಿ ಪಟ್ಟಿ ನೀಡಿದೆ.
ಕಾಂಗ್ರೆಸ್ ನೀಡಿದ ಪಟ್ಟಿ ಇಲ್ಲಿದೆ...
*ಕಾರಣ ನೀಡದೆ ಸಿಎಂ ಸ್ಥಾನದಿಂದ ಬಿಎಸ್ವೈ ಪದಚ್ಯುತಿ *ಅವರ ರಾಜ್ಯ ಪ್ರವಾಸಕ್ಕೆ ತಡೆ *ಬಿಎಸ್ವೈ ಆಪ್ತರ ಮೇಲೆ ಐಟಿ ದಾಳಿ *ವಿಜಯೇಂದ್ರರಿಗೆ ಪರಿಷತ್ ಸ್ಥಾನ ವಂಚನೆ *ನಿಗಮ, ಮಂಡಳಿಗಳಿಂದ ಆಪ್ತರ ಕಿಕ್ಔಟ್
‘ಇನ್ನೆಷ್ಟು ಬಾಣಗಳಿವೆ?’ ಬಿಜೆಪಿಗೆ ಕಾಂಗ್ರೆಸ್ ಪ್ರಶ್ನಿಸಿದೆ.
#BSYmuktaBJP ಎಂಬ ಹ್ಯಾಶ್ಟ್ಯಾಗ್ ಬಳಸಿ ಕಾಂಗ್ರೆಸ್ ಟ್ವೀಟಿಸಿದೆ.
ಭೀಷ್ಮನಂತೆ ಶರಶಯ್ಯೆಯಲ್ಲಿ ಮಲಗಿರುವ BSY ಅವರಿಗೆ ಬಿಜೆಪಿ ಚುಚ್ಚಿದ ದ್ರೋಹದ ಬಾಣಗಳು👇
◆ಕಾರಣ ನೀಡದೆ ಸಿಎಂ ಸ್ಥಾನದಿಂದ ಪದಚ್ಯುತಿ! ◆ಅವರ ರಾಜ್ಯ ಪ್ರವಾಸಕ್ಕೆ ತಡೆ ◆ಆಪ್ತರ ಮೇಲೆ ಐಟಿ ದಾಳಿ ◆ವಿಜಯೇಂದ್ರರಿಗೆ ಪರಿಷತ್ ಸ್ಥಾನ ವಂಚನೆ ◆ನಿಗಮ, ಮಂಡಳಿಗಳಿಂದ ಆಪ್ತರ ಕಿಕ್ಔಟ್