ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮತ್ತೆ ಟ್ವೀಟ್ ಸಮರ: ಸಿದ್ದರಾಮಯ್ಯಗೆ ಬಿಜೆಪಿ ಸರಣಿ ಪ್ರಶ್ನೆ

Last Updated 29 ಮಾರ್ಚ್ 2021, 13:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿರುವ ಬಿಜೆಪಿ ಸಿಡಿ ಪ್ರಕರಣ ಕುರಿತಂತೆ ಟ್ವಿಟರ್ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸಮರ ಮುಂದುವರಿದಿದೆ.

ಸೋಮವಾರ ಮತ್ತೆ ಟ್ವೀಟ್ ಮಾಡಿರುವ ಬಿಜೆಪಿ, ಸಿಡಿ ಪ್ರಕರಣದಲ್ಲಿ ಯುವತಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸಿರುವ ವಿಚಾರ ಮುಂದಿಟ್ಟುಕೊಂಡು, ಸಿದ್ದರಾಮಯ್ಯ ಅವರಿಗೆ ಸರಣಿ ಟ್ವೀಟ್ ಮೂಲಕ ಪ್ರಶ್ನೆಗಳನ್ನು ಕೇಳಿದೆ.

ಸಂತ್ರಸ್ಥ ಯುವತಿಯ ಪೋಷಕರು ನೇರವಾಗಿ ನಿಮ್ಮ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮೇಲೆ ಬೊಟ್ಟು ಮಾಡಿ, ಸಂತ್ರಸ್ಥೆಯನ್ನು ಒತ್ತೆಯಾಗಿರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಿರುವಾಗ ಯುವತಿಗೆ ಅಪಾಯ ಎದುರಾದರೆ ಕಾನೂನಿನ ಪ್ರಕಾರ ಡಿಕೆಶಿ ಅವರು ಹೊಣೆ ಅಲ್ಲವೇ?

ನಿಮಗೆ ಈಗ ಜ್ಞಾನೋದಯವಾಗಿದ್ದೇ!?ಸದನದಲ್ಲಿ ಬಜೆಟ್‌ ಮೇಲಿನ ಚರ್ಚೆಯ ಸಮಯವನ್ನು ಅಪ್ರಸ್ತುತವಾದ ವಿಚಾರಕ್ಕೆ ಬಳಸಿಕೊಂಡು ಸದನದಅಮೂಲ್ಯ ಸಮಯ ವ್ಯರ್ಥ ಮಾಡುವಾಗ ಇದೆಲ್ಲಾ ನೆನಪಿರಲಿಲ್ಲವೇ? ಡಿಕೆಶಿ ಹೆಸರು ಬರುತ್ತಲೇ ವರಸೆ ಬದಲಾಯಿಸಿಬಿಟ್ಟಿರಿ!

ನಿಮ್ಮ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚನೆಯಾದರೆ ಒಂದೇ ಕಲ್ಲಿನಲ್ಲಿ ಎರಡು ಹಣ್ಣು ಕೆಡವಲು ಸಾಧ್ಯವಿದೆ. ಒಂದು, ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುತ್ತದೆ. ಇನ್ನೊಂದು, ಡಿ ಕೆ ಶಿವಕುಮಾರ್ ನಡೆಸಿದ ಷಡ್ಯಂತ್ರವನ್ನು ಸಾಬೀತುಪಡಿಸಬಹುದು.

ಒಬ್ಬ ಪ್ರತಿಸ್ಪರ್ಧಿಯನ್ನು ಕೆಡವಿದ ಸಾಧನೆ ನಿಮ್ಮದಾಗಲಿದೆ. ಏನಂತೀರಿ? ಒಬ್ಬ ಅಮಾಯಕ ಹೆಣ್ಣು ಮಗಳನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಬಳಸಿಕೊಂಡು ರಾಜ್ಯದ "ಮಹಾ ನಾಯಕ" ಆಗಲು ಹೊರಟ "ಜೈಲು ಹಕ್ಕಿ" ಇಂದು "ಖಳನಾಯಕ" ಆಗಿರುವುದು ಕಾಂಗ್ರೆಸ್ ಪಕ್ಷದ ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT