ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲೈಕೆ ರಾಜಕಾರಣದಿಂದ ಮಹಿಳೆಯರ ಬದುಕಿಗೆ ಅಪಾಯ: ಕೆಟಿಆರ್‌ಗೆ ಬಿಜೆಪಿ ತಿರುಗೇಟು

ಅಕ್ಷರ ಗಾತ್ರ

ಬೆಂಗಳೂರು: ಪ್ರವಾದಿ ಮಹಮ್ಮದರ ಕುರಿತ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯುದೇಶದ ಕ್ಷಮೆಯಾಚಿಸಬೇಕು ಎಂದು ಹೇಳಿದ್ದ ತೆಲಂಗಾಣರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ (ಕೆಟಿಆರ್) ವಿರುದ್ಧ 'ಬಿಜೆಪಿ ಕರ್ನಾಟಕ' ಕಿಡಿಕಾರಿದೆ.

'ಪ್ರಿಯಕೆ.ಟಿ. ರಾಮರಾವ್ ಅವರೇ, ಪ್ರಬಲ ಕುಟುಂಬಗಳಿಗೆ ಸೇರಿದ ಐವರು ಯುವಕರು ಹೈದರಾಬಾದ್‌ನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಇತ್ತೀಚೆಗೆ ಅತ್ಯಾಚಾರವೆಸಗಿದ್ದರು. ನಿಮ್ಮ ಪಕ್ಷದ ಓಲೈಕೆ ರಾಜಕಾರಣವು ತೆಲಂಗಾಣದಲ್ಲಿ ಮಹಿಳೆಯರು ಮತ್ತು ಮಕ್ಕಳ ಬದುಕನ್ನು ಅಪಾಯಕ್ಕೆ ನೂಕಿದೆ. ಆರೋಪಿಗಳ ವಿರುದ್ಧ ನೀವು ಕ್ರಮ ಕೈಗೊಳ್ಳುವಿರಾ? ಮತ್ತು ಅವರಿಗೆ ಶಿಕ್ಷೆಯಾಗಲಿದೆ ಎಂಬುದನ್ನು ಖಚಿತಪಡಿಸುವಿರಾ?' ಎಂದು ಪ್ರಶ್ನಿಸಿದೆ.

ಬಿಜೆಪಿ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್‌ ಶರ್ಮಾ ಅವರು ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮಹಮ್ಮದರ ಕುರಿತಾಗಿಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಅರಬ್‌ ರಾಷ್ಟ್ರಗಳು, ಈ ಬಗ್ಗೆ ಭಾರತವು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸುತ್ತಿವೆ.

ಈ ಸಂಬಂಧ ಟ್ವಿಟರ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಕೆಟಿಆರ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್‌ ಮಾಡಿ,‘ಬಿಜೆಪಿಯ ಮತಾಂಧರು ಮಾಡಿರುವ ದ್ವೇಷ ಭಾಷಣೆಗಳಿಗೆ ಭಾರತವೇಕೆ ಕ್ಷಮೆಯಾಚಿಸಬೇಕು?ಕ್ಷಮೆ ಕೇಳಬೇಕಿರುವುದು ಬಿಜೆಪಿಯೇ ಹೊರತು ಭಾರತವಲ್ಲ. ಹಗಲಿರುಳು ದ್ವೇಷ ಹರಡುತ್ತಿರುವುದಕ್ಕಾಗಿ ನಿಮ್ಮ ಪಕ್ಷವು ಮೊದಲು ಭಾರತೀಯರಲ್ಲಿ ಕ್ಷಮೆ ಕೇಳಲಿ’ ಎಂದು ಒತ್ತಾಯಿಸಿದ್ದರು.

ಮತ್ತೊಂದು ಟ್ವೀಟ್‌ನಲ್ಲಿ,‘ಮೋದಿಜೀ, ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಅವರು ಮಹಾತ್ಮ ಗಾಂಧಿಯವರ ಹತ್ಯೆಯನ್ನು ಶ್ಲಾಘಿಸಿದಾಗ ನಿಮ್ಮ ಮೌನವು ಆಘಾತಕಾರಿಯಾಗಿತ್ತು. ಈ ಮೌನ ಸಮ್ಮತಿಯು ಧರ್ಮಾಂಧತೆ ಮತ್ತು ದ್ವೇಷವನ್ನು ಉತ್ತೇಜಿಸಿದೆ. ಇದು ಭಾರತಕ್ಕೆ ಸರಿಪಡಿಸಲಾಗದ ನಷ್ಟವನ್ನುಂಟು ಮಾಡಲಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದರು. ಅದಕ್ಕೆತಿರುಗೇಟು ನೀಡುವ ಧಾಟಿಯಲ್ಲಿ 'ಬಿಜೆಪಿ ಕರ್ನಾಟಕ' ಟ್ವೀಟ್ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT