ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾವಿಗಳಿಗೆ ಬ್ಲ್ಯಾಕ್‌ಮೇಲ್: ದೂರು

Last Updated 23 ಜೂನ್ 2022, 19:51 IST
ಅಕ್ಷರ ಗಾತ್ರ

ಬೀದರ್‌: ಸಾಮಾಜಿಕ ಜಾಲತಾಣದಲ್ಲಿ ಪ್ರಭಾವಿ ವ್ಯಕ್ತಿಗಳನ್ನು ಪರಿಚಯಿಸಿಕೊಂಡು ಸ್ನೇಹ ಬೆಳೆಸಿ ಅವರ ನಗ್ನ ವಿಡಿಯೊ ಚಿತ್ರೀಕರಿಸಿ ನಂತರ ಹಣ ವಸೂಲಿ ಮಾಡುವ ಜಾಲಕ್ಕೆ ಒಂದು ವರ್ಷದಲ್ಲಿ ಜಿಲ್ಲೆಯ 15 ಮಂದಿ ಸಿಲುಕಿ, ಹಣ ಕಳೆದುಕೊಂಡಿದ್ದಾರೆ.

'ರಾಜಸ್ತಾನ, ಜಾರ್ಖಂಡ್‌ನ ಜಾಲವು ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯ ಚೆಂದದ ಚಿತ್ರದ ಡಿಪಿ ಇಟ್ಟು ಮಧ್ಯ ವಯಸ್ಕರು, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಪ್ರಭಾವಿಗಳನ್ನು ಗುರಿ ಮಾಡುತ್ತಿದೆ’ ಎಂದು ವಂಚನೆ ಒಳಗಾದವರು ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

‘ಅಪರಾಧ ಕೃತ್ಯದಲ್ಲಿ ತೊಡಗಿದವರು ಬೇರೆಯವರ ಮೊಬೈಲ್ ನಂಬರ್, ವಿಳಾಸ ಕೊಟ್ಟು ತೆರೆಮರೆಯಲ್ಲಿ ಇಂತಹ ಕೆಲಸ ನಡೆಸಿದ್ದಾರೆ. ಸಾರ್ವಜನಿಕರು ಅಪರಿಚಿತರಿಗೆ ಮೊಬೈಲ್‌ ನಂಬರ್‌ ಕೊಡಬಾರದು. ಯಾವುದೇ ರೀತಿಯ ಮಾಹಿತಿ ಹಂಚಿಕೊಳ್ಳಬಾರದು. ಮೊಬೈಲ್‌ ಕಳ್ಳತನವಾಗಿದ್ದರೆ ನಂಬರ್‌ ತಕ್ಷಣ ಬ್ಲಾಕ್‌ ಮಾಡಿಸಬೇಕು. ಬ್ಯಾಂಕ್‌ ಅಕೌಂಟ್ ಕೂಡ ಬ್ಲಾಕ್‌ ಮಾಡಿಸಬೇಕು. ಕಳ್ಳತನದ ಮೊಬೈಲ್‌ನಲ್ಲಿರುವ ಸಿಮ್‌ ಬಳಸಿ ವಂಚಿಸುತ್ತಿರುವುದು ಹೆಚ್ಚಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ್‌ಬಾಬು
ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT