ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧ ಕ್ರಿಕೆಟಿಗರಿಗೆ ಕ್ರೀಡಾಸಕ್ತರ ಪ್ರೋತ್ಸಾಹ

ಸ್ವಯಂ ಸೇವಕರಾಗಿ ಕೆಲಸ ಮಾಡಿದ ಕೆಎಲ್‌ಇ ಶೇಷಗಿರಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು
Last Updated 7 ಫೆಬ್ರುವರಿ 2023, 16:54 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಆಟೋ ನಗರದ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ (ಕೆಎಸ್‌ಸಿಎ) ಮೈದಾನದಲ್ಲಿ ಮಂಗಳವಾರ ನಡೆದ ಪುರುಷರ ರಾಷ್ಟ್ರಮಟ್ಟದ ಅಂಧರ ಟಿ20 ಕ್ರಿಕೆಟ್‌ ಟೂರ್ನಿಯ ಮೂರನೇ ದಿನದ ಪಂದ್ಯಗಳು ಗಮನ ಸೆಳೆದವು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಕ್ರೀಡಾಸಕ್ತರು ಹಾಗೂ ಮಾಹೇಶ್ವರಿ ಅಂಧ ಮಕ್ಕಳ ಶಾಲೆ ವಿದ್ಯಾರ್ಥಿಗಳು ವೀಕ್ಷಿಸಿ, ಆಟಗಾರರನ್ನು ಪ್ರೋತ್ಸಾಹಿಸಿದರು.

ಸಮರ್ಥನಂ ಅಂಗವಿಕಲರ ಸಂಸ್ಥೆ, ‘ಪ್ರಜಾವಾಣಿ’, ಇಂಡಸ್‌ಇಂಡ್‌ ಬ್ಯಾಂಕ್‌, ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌, ಕ್ರಿಕೆಟ್‌ ಅಸೋಸಿ
ಯೇಷನ್‌ ಫಾರ್‌ ದಿ ಬ್ಲೈಂಡ್‌ ಸಹಯೋಗ
ದಲ್ಲಿ ಆಯೋಜಿಸಿದ್ದ ಟೂರ್ನಿಯಲ್ಲಿ ಬೆಳಿಗ್ಗೆ ಉತ್ತರ ಪ್ರದೇಶ–‍ಪಶ್ಚಿಮ ಬಂಗಾಳ, ಮಧ್ಯಾಹ್ನ ಕರ್ನಾಟಕ–ಮಹಾರಾಷ್ಟ್ರ ತಂಡಗಳ ಮಧ್ಯೆ ಪಂದ್ಯ ನಡೆಯಿತು.

ಕರ್ನಾಟಕ ಹಾಗೂ ಮಹಾರಾಷ್ಟ್ರದ ಆಟ ರೋಚಕವಾಗಿತ್ತು. ಆಟಗಾರರು ಬೌಂಡರಿ ಬಾರಿಸಿದಾಗ ಮತ್ತು ವಿಕೆಟ್‌ ಪಡೆದಾಗ, ಪ್ರೇಕ್ಷಕರು, ಮಕ್ಕಳು ಚಪ್ಪಾಳೆ ಮತ್ತು ಸಿಳ್ಳೆಗಳ ಸುರಿಮಳೆ ಹರಿಸಿದರು. ಕೆಲವರು ಆಟಗಾರರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

ಕೆಎಲ್‌ಇ ಸಂಸ್ಥೆಯ ಡಾ.ಎಂ.ಎಸ್‌.ಶೇಷಗಿರಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ
ಸೇವಕರಾಗಿ, ಆಟಗಾರರಿಗೆ ನೀರು, ಕಮೆಂಟ್ರಿ ಹೇಳುವವರಿಗೆ ಮೈಕ್‌, ತಂಪು ಪಾನೀಯ ನೀಡಿ ಪ್ರೋತ್ಸಾಹಿಸಿದರು. ಕೊನೆಯಲ್ಲಿ ಆಟಗಾರರು, ಪ್ರೇಕ್ಷಕರಿಗೆ ಅಲ್ಪೋಪಾಹಾರ ಬಡಿಸಿದರು.

ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಮರ್ಥನಂ ಅಂಗವಿಕಲರ ಸಂಸ್ಥೆಯ ಬೆಳಗಾವಿ ಶಾಖೆ ಮುಖ್ಯಸ್ಥ ಎಂ.ಜಿ.ಅರುಣಕುಮಾರ್‌, ‘ಬೆಳಗಾವಿಯಲ್ಲಿ ಆಯೋಜಿಸುವ ಅಂಧರ ಕ್ರಿಕೆಟ್‌ ಟೂರ್ನಿಯನ್ನು ಜನರು ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಟೂರ್ನಿಗಳನ್ನು ಸಂಘಟಿಸಲಾಗುವುದು’ ಎಂದರು.

ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಪ್ರಕಾಶ ಜಯ
ರಾಮಯ್ಯ ಅವರಿಗೆ ‘ಪ್ರಜಾವಾಣಿ’ ಜಿಲ್ಲಾ ವರದಿಗಾರ ಸಂತೋಷ ಈ. ಚಿನಗುಡಿ ‘ಪ‍ಂದ್ಯಶ್ರೇಷ್ಠ’ ಪ್ರಶಸ್ತಿ ನೀಡಿದರು.

ಕೆಎಸ್‌ಸಿಎ ಸದಸ್ಯ ಡಿ.ಟಿ.ಕುಮಾರ್‌, ದೀಪಾ ಈಟಿ, ಶಿವಕುಮಾರ ಹಲ್ಯಾಳ, ಬಿ.ಪಂಡಿತ, ಸತ್ಯಪ್ಪ ರಾಚಪ್ಪನವರ, ಬಿಷನ್‌ ಸಿಂಗ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT