ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಪ್ರಯಾಣಿಕರಿಗೆ ಒಂದು ದಿನ, ಮೂರು ದಿನದ ಪಾಸ್‌

Last Updated 30 ಮಾರ್ಚ್ 2022, 19:09 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಪ್ರಯಾಣಿಕರ ಅನುಕೂಲಕ್ಕಾಗಿ ಒಂದು ದಿನದ ಮತ್ತು ಮೂರು ದಿನದ ಪಾಸ್‌ಗಳನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಪರಿಚಯಿಸಿದೆ.

ಏ.2ರಿಂದ ಈ ಯೋಜನೆಗೆ ಚಾಲನೆ ದೊರಯಲಿದೆ. ₹200 ದರದ ಒಂದು ದಿನದ ಪಾಸ್‌ ಖರೀದಿಸಿದವರು ಆ ದಿನ ಮೆಟ್ರೊ ರೈಲಿನಲ್ಲಿ ಅನಿಯಮಿತವಾಗಿ ಪ್ರಯಾಣಿಸಬಹುದು. ₹400 ಮೊತ್ತದ ಪಾಸ್ ಖರೀದಿಸಿದವರು ಮೂರು ದಿನ ಪ್ರಯಾಣಿಸಲು ಅವಕಾಶ ಇದೆ. ಪಾಸ್‌ಗಳು ನಿಲ್ದಾಣದ ಟಿಕೆಟ್ ಕೌಂಟರ್‌ಗಳಲ್ಲಿ ಲಭ್ಯವಿರುತ್ತದೆ. ಪ್ರಯಾಣ ಪೂರ್ಣಗೊಳಿಸಿದ ನಂತರ ಉತ್ತಮ ಸ್ಥಿತಿಯಲ್ಲಿರುವ ಸ್ಮಾರ್ಟ್‌ ಕಾರ್ಡ್‌ಗಳನ್ನು (ಪಾಸ್‌) ಗ್ರಾಹಕ ಸಂಪರ್ಕ ಕೇಂದ್ರಗಳಲ್ಲಿ ಹಿಂದಿರುಗಿಸಿದರೆ ಭದ್ರತಾ ಠೇವಣಿ ₹50 ಹಿಂಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT