ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 61 ಸಾವಿರ ಕೋಟಿ ಹೂಡಿಕೆ ಒಪ್ಪಂದಕ್ಕೆ ಸಹಿ

Last Updated 29 ಏಪ್ರಿಲ್ 2022, 18:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ₹61 ಸಾವಿರ ಕೋಟಿ ಮೊತ್ತದ ಹೂಡಿಕೆಯ ಒಡಂಬಡಿಕೆಗೆ ಹಲವು ಸಂಸ್ಥೆಗಳು ಸಹಿ ಹಾಕಿದ್ದು, ಇದರಿಂದ ರಾಜ್ಯದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 12 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್‌ ತಿಳಿಸಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ‘ವಿಂಡರ್ಜಿ 2022’ ಸಮ್ಮೇಳನದಲ್ಲಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹಲವಾರು ಹೂಡಿಕೆದಾರರು ₹61,000 ಕೋಟಿ ಮೊತ್ತದ ಎಕ್ಸ್‌ಪ್ರೆಶನ್‌ ಆಫ್ ಇಂಟರೆಸ್ಟ್‌ಗೆ ಸಹಿ ಹಾಕಿದ್ದಾರೆ. ರಾಜ್ಯದ ಇಂಧನ ಇಲಾಖೆ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊಪ್ಪಳ, ಗದಗ, ದಾವಣರೆಗೆರೆ, ಚಿತ್ರದುರ್ಗ, ವಿಜಯನಗರ, ತುಮಕೂರು, ಬಾಗಲಕೋಟೆ ಭಾಗದಲ್ಲಿ ಹೂಡಿಕೆಯಾಗಿ ಉದ್ಯೋಗ ಸೃಷ್ಟಿಯಾಗಲಿದೆ. 9,218 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗಲಿದೆ ಎಂದರು.

ರಿನ್ಯೂ, ಟೊರೆಂಟ್‌, ಇಡಿಎಫ್‌ ರಿನ್ಯೂಬಲ್‌ ನಂತಹ ಖ್ಯಾತ ಕಂಪನಿಗಳು ಎಕ್ಸ್‌ಪ್ರೆಶನ್‌ ಆಫ್‌ ಇಂಟರೆಸ್ಟ್‌ಗೆ ಸಹಿ ಮಾಡಿವೆ. ಇಂಡಿಯನ್‌ ವಿಂಡ್‌ ಟರ್ಬೈನ್‌ ಮ್ಯಾನ್ಯುಫಾಕ್ಚರರ್ಸ್‌ ಅಸೋಸಿಯೇಶನ್‌ ಮತ್ತು ಪಿಡಿಎ ಟ್ರೇಡ್‌ ಫೇರ್ಸ್‌ ಪ್ರೈವೇಟ್‌ ಲಿಮಿಟೆಡ್ ಮೂರು ದಿನಗಳ ಸಮ್ಮೇಳನ ಆಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT