ಶುಕ್ರವಾರ, ಏಪ್ರಿಲ್ 23, 2021
31 °C
ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯಾಚರಣೆ

ಲಂಚ ಪಡೆದು ಸಿಕ್ಕಿಬಿದ್ದ ರೇಷ್ಮೆ ಪ್ರದರ್ಶಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ರೇಷ್ಮೆ ಇಲಾಖೆಯ ಸಹಾಯಧನ ಮಂಜೂರು ಮಾಡಲು ಫಲಾನುಭವಿ ಬಳಿ ₹ 10 ಸಾವಿರ ಲಂಚ ಪಡೆಯುತ್ತಿದ್ದ ಸಹಾಯಕ ನಿರ್ದೇಶಕರ ಕಚೇರಿಯ ರೇಷ್ಮೆ ಪ್ರದರ್ಶಕ ಒ.ಶಿವಕುಮಾರ್ ಮಂಗಳವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಶಿವಕುಮಾರ್‌ ಅವರ ಮನೆಯ ಮೇಲೂ ದಾಳಿ ನಡೆದಿದ್ದು, ಅವರನ್ನು ಎಸಿಬಿ ಬಂಧಿಸಿದೆ. ತಾಲ್ಲೂಕಿನ ಚಿಕ್ಕಪ್ಪನಹಳ್ಳಿ ಗ್ರಾಮದ ಫಲಾನುಭವಿ ಎನ್‌.ಜೆ. ಸಂತೋಷ್‌ಕುಮಾರ್ 2019–20ನೇ ಸಾಲಿನಲ್ಲಿ 2 ಎಕರೆ, 20 ಗುಂಟೆ ಜಮೀನಿನಲ್ಲಿ ರೇಷ್ಮೆ ಮನೆ ನಿರ್ಮಿಸಿಕೊಂಡಿದ್ದಾರೆ. ₹ 3 ಲಕ್ಷ ಸಹಾಯಧನ ಮಂಜೂರಾತಿಗೆ ಶಿವಕುಮಾರ್‌ ಶೇ 10ರಂತೆ ₹ 30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಫಲಾನುಭವಿ ನೀಡಿಲ್ಲ.

ರೇಷ್ಮೆ ಬೆಳೆ ಬೆಳೆದು ಮೂರು ವರ್ಷಗಳಾಗಿದ್ದು, ಎರಡನೇ ವರ್ಷದ ಟ್ರಂಚಿಂಗ್ ಮತ್ತು ಮಲ್ಚಿಂಗ್‌ ಕೂಡ ಪೂರ್ಣಗೊಂಡಿದೆ. ಸಹಾಯಧನ ಬಿಡುಗಡೆಗೊಳಿಸಿ ಎಂದು ಸಂತೋಷ್‌ಕುಮಾರ್ ಮಾರ್ಚ್‌ 15ರಂದು ಇಲಾಖೆಗೆ ಭೇಟಿ ನೀಡಿ ಶಿವಕುಮಾರ್‌ಗೆ ಮನವಿ ಮಾಡಿದರು. ಆಗ  ಅವರು ₹ 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮಂಗಳವಾರ ಲಂಚದ ಹಣವನ್ನು ಪಡೆಯುತ್ತಿದ್ದಾಗ ಎಸಿಬಿ ಡಿವೈಎಸ್‌ಪಿ ಬಸವರಾಜ್ ಆರ್.ಮಗದುಮ್, ಪ್ರವೀಣ್‌ಕುಮಾರ್‌ ನೇತೃತ್ವದ ತಂಡ ದಾಳಿ ನಡೆಸಿತು. ತನಿಖೆ ಮುಂದುವರಿದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.