ಬಸ್ ಪಲ್ಟಿ– 8 ಮಂದಿಗೆ ಗಾಯ
ಚಿಕ್ಕಮಗಳೂರು: ತಾಲ್ಲೂಕಿನ ಬಾಬಾಬುಡನ್ ಗಿರಿಯಲ್ಲಿ ಗುರುವಾರ ಸಂಜೆ ಎಸ್‌ಎಂಎಸ್ ಬಸ್ ಉರುಳಿಬಿದ್ದು ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಮೈಸೂರು ಜಿಲ್ಲೆಯಪಿರಿಯಾಪಟ್ಟಣದ ಝರಿನಾ ಬಾನು (54), ಜಹಿರಾ ಬಾನು (50), ಹುಬ್ಬಳ್ಳಿಯ ಶಯಿನಾ(23) , ಬೇಗಂ ಬಿ (74), ಮೀರಜ್‌ನ ಹನೀಫ್ (15) , ಚಿಕ್ಕಮಗಳೂರು ತಾಲ್ಲೂಕಿನ ಅತ್ತಿಗುಂಡಿಯ ಶಾಖಿಬ್ (24), ವಿಜಯಪುರದ ರಶೀದಾ ಬಾನು (55) ಹಾಗೂ ದಾವಣಗೆರೆ ಜಿಲ್ಲೆ ಹರಪ್ಪನಹಳ್ಳಿಯ ಸಾಧಿಕಾ (4) ಗಾಯಗೊಂಡವರು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
‘ಗಿರಿಯಲ್ಲಿ ಬಸ್ ನಿಂತಿತ್ತು. ಚಾಲಕ ಇಳಿದು ಹೋಗಿದ್ದರು. ಏಳು ಜನ ಬಸ್‌ನೊಳಗಿದ್ದೆವು. ವ್ಯಕ್ತಿಯೊಬ್ಬ ಚಾಲಕನ ಸೀಟಿನಲ್ಲಿ ಕುಳಿತು ಬಸ್ ಸ್ಟಾರ್ಟ್ ಮಾಡಿದರು. ಆಗ ಬಸ್ ಚಲಿಸಿತು, ರಸ್ತೆ ಬದಿಯ ಕಂದಕಕ್ಕೆ ಬಿದ್ದಿತು’ ಎಂದು ಗಾಯಾಳು ಶಯಿನಾ ಅವರು ‘ಪ್ರಜಾವಾಣಿ’ಗೆ
ತಿಳಿಸಿದರು.
ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.