ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ: ಕೋವಿಡ್‌ ನಿಯಮ ಉಲ್ಲಂಘನೆಯ 61 ಪ್ರಕರಣ ದಾಖಲು

Last Updated 27 ಏಪ್ರಿಲ್ 2021, 21:22 IST
ಅಕ್ಷರ ಗಾತ್ರ

ರಾಯಚೂರು/ ಬೀದರ್‌: ವಿಧಾನಸಭೆ ಉಪ ಚುನಾವಣೆ ಸಮಯದಲ್ಲಿ ರಾಜಕಾರಣಿಗಳು ಕೋವಿಡ್‌ ನಿಯಮ ಉಲ್ಲಂಘಿಸಿದ್ದಕ್ಕಾಗಿ ಮಸ್ಕಿ ಕ್ಷೇತ್ರದಲ್ಲಿ 46 ಹಾಗೂ ಬಸವಕಲ್ಯಾಣ ಕ್ಷೇತ್ರದಲ್ಲಿ 15 ಪ್ರಕರಣಗಳು ದಾಖಲಾಗಿವೆ.

ಚುನಾವಣೆ ಅಧಿಸೂಚನೆಗೂ ಮುನ್ನಮಸ್ಕಿ ಪಟ್ಟಣದ ಭ್ರಮರಾಂಬ ದೇವಸ್ಥಾನ ಪಕ್ಕದ ಮೈದಾನದಲ್ಲಿ ಬಿಜೆಪಿಯಿಂದ ಬಹಿರಂಗ ಸಮಾವೇಶ ಆಯೋಜಿಸಲಾಗಿತ್ತು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಪಾಲ್ಗೊಂಡಿದ್ದರು.ಹೆಚ್ಚಿನಸಂಖ್ಯೆಯ ಜನರನ್ನು ಸೇರಿಸಿದ್ದಕ್ಕಾಗಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವಪುತ್ರಪ್ಪ ಅರಳಿಹಳ್ಳಿ ಸೇರಿ ಕೆಲವು ಕಾರ್ಯಕರ್ತರ ವಿರುದ್ಧ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಧಿಸೂಚನೆ ಬಳಿಕ ಅದೇ ಮೈದಾನದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಬಹಿರಂಗ ಪ್ರಚಾರ ಸಮಾವೇಶ ಆಯೋಜಿಸಲಾಗಿತ್ತು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು. ಜನರನ್ನು ಸೇರಿಸಿದ್ದಕ್ಕಾಗಿ ಮಸ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಚಾರದ ಸಂದರ್ಭದಲ್ಲಿ ಮಸ್ಕಿ ಪಟ್ಟಣದ ತೇರುಬೀದಿಯಲ್ಲಿ ಕಾಂಗ್ರೆಸ್‌, ಬಿಜೆಪಿಯಿಂದ ಪ್ರತ್ಯೇಕ ಸಾರ್ವಜನಿಕ ಸಭೆ ನಡೆದವು. ಬಳಗಾನೂರ, ತುರ್ವಿಹಾಳ, ಸಂತೆಕಲ್ಲೂರು, ಬಪ್ಪೂರು ಸೇರಿದಂತೆ ಹಲವು ಕಡೆಗಳಲ್ಲಿ ಬಹಿರಂಗ ಸಭೆ ನಡೆದವು.

ಕ್ಷೇತ್ರದಲ್ಲಿ ಕೋವಿಡ್‌ ನಿಯಮ ಉಲ್ಲಂಘನೆಯ ಒಟ್ಟಾರೆ 46 ಪ್ರಕರಣ ದಾಖಲಿಸಿ, ದಂಡವನ್ನೂ ವಸೂಲಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ವಸೂಲಾದ ದಂಡದ ಮೊತ್ತದ ಬಗ್ಗೆ ಅವರು ಮಾಹಿತಿ ನೀಡಲಿಲ್ಲ.

ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್ ಅವರ ವಿರುದ್ಧ ಎರಡು, ಅವರ ಪಕ್ಷದ ಕಾರ್ಯಕರ್ತರ ಮೇಲೆ ಐದು ಸೇರಿ ಕಾಂಗ್ರೆಸ್‌ನವರ ವಿರುದ್ಧ ಏಳು ಪ್ರಕರಣ ದಾಖಲಾಗಿವೆ.

ಬಿಜೆಪಿ ಬಸವಕಲ್ಯಾಣ ಬ್ಲಾಕ್‌ ಅಧ್ಯಕ್ಷ ಅಶೋಕ ವಕಾರೆ ಹಾಗೂ ಕಾರ್ಯಕರ್ತರು ಸೇರಿ ಆರು ಪ್ರಕರಣ, ಜೆಡಿಎಸ್‌ನ ಕಾರ್ಯಕರ್ತ ಷರೀಫ್‌ ಪಾಷಾ ಹಾಗೂ ಎಐಎಂಐಎಂ ಕಾರ್ಯಕರ್ತ ಮಹಮ್ಮದ್‌ ಅಲಿ ಹಕೀಮ್ ವಿರುದ್ಧ ತಲಾ ಒಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT