ಮಂಗಳವಾರ, ಡಿಸೆಂಬರ್ 7, 2021
21 °C

ಉಪ ಚುನಾವಣೆ ಫಲಿತಾಂಶ: ಸಿಂದಗಿಯಲ್ಲಿ ಬಿಜೆಪಿ, ಹಾನಗಲ್‌ನಲ್ಲಿ ಕಾಂಗ್ರೆಸ್ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ/ವಿಜಯಪುರ: ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಬಿರುಸಿನಿಂದ ಸಾಗಿದೆ. ಬೆಳಗ್ಗೆ 10ರ ವೇಳೆ 5 ಸುತ್ತುಗಳ ಮತ ಎಣಿಕೆ ಮುಗಿದಿದೆ.

ಸಿಂದಗಿಯಲ್ಲಿ 5ನೇ ಸುತ್ತಿನ ಬಳಿಕ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 9,751 ಮತಗಳ ಮುನ್ನಡೆ ಸಾಧಿಸಿದ್ದರು.
 
ಅಭ್ಯರ್ಥಿಗಳು ಪಡೆದ ಮತಗಳ ವಿವರ(5 ಸುತ್ತು ಸೇರಿ)

*ಅಶೋಕ ಮನಗೂಳಿ (ಕಾಂಗ್ರೆಸ್):13,563

*ರಮೇಶ ಭೂಸನೂರ (ಬಿಜೆಪಿ):23,314 

*ನಾಜಿಯಾ ಅಂಗಡಿ (ಜೆಡಿಎಸ್): 710

*ಡಾ.ಸುನೀಲ್ ಕುಮಾರ್ ಹೆಬ್ಬಿ(ಕರ್ನಾಟಕ ರಾಷ್ಟ್ರ ಸಮತಿ):199

*ಜಿಲಾನಿ ಗುಡುಸಾಬ ಮುಲ್ಲಾ(ಪಕ್ಷೇತರ):101

*ದೀಪಿಕಾ ಎಸ್.(ಪಕ್ಷೇತರ):100

*ನೋಟಾ:234

 ಹಾನಗಲ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ತೀವ್ರ ಹನಾಹಣಿ ನಡೆದಿದೆ. ನಾಲ್ಕನೇ ಸುತ್ತಿನ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ 250 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು.

ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ (4 ಸುತ್ತು ಸೇರಿ)

ಬಿಜೆಪಿ- ಶಿವರಾಜ ಸಜ್ಜನರ- 17,769
ಕಾಂಗ್ರೆಸ್- ಶ್ರೀನಿವಾಸ ಮಾನೆ- 18,019
ಜೆಡಿಎಸ್- ನಿಯಾಜ್ ಶೇಖ್- 149

ಕಾಂಗ್ರೆಸ್ ಗೆ 250 ಮತಗಳ ಮುನ್ನಡೆ

ಲೇಟೆಸ್ಟ್ ಮಾಹಿತಿಗೆ ಲೈವ್ ಬ್ಲಾಗ್ ನೋಡಿ.. Live| ವಿಧಾನಸಭಾ ಉಪಚುನಾವಣೆ ಮತ ಎಣಿಕೆ: ಬಿಜೆಪಿ ಹಿಡಿತದಲ್ಲಿ ಸಿಂದಗಿ; ಹಾನಗಲ್‌ನಲ್ಲಿ ಕಾಂಗ್ರೆಸ್‌–ಬಿಜೆಪಿ ತೂಗುಯ್ಯಾಲೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು