ಸಿಂದಗಿಯಲ್ಲಿ ಬಿಜೆಪಿ ಗೆಲುವು ಬಹುತೇಕ ಖಚಿತ, ಹಾನಗಲ್‌ನಲ್ಲಿ ಕಾಂಗ್ರೆಸ್ ಮುನ್ನಡೆ

ಹಾವೇರಿ/ವಿಜಯಪುರ: ಭಾರೀ ಜಿದ್ದಾಜಿದ್ದಿಯಲ್ಲಿ ನಡೆದ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದೊಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ತೀವ್ರ ಹಿನ್ನಡೆ ಅನುಭವಯಿಸಿದ್ದಾರೆ.
19 ಸುತ್ತುಗಳ ಬಳಿಕ ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 28,163 ಮತಗಳ ಮುನ್ನಡೆ ಸಾಧಿಸಿದ್ದರು. ಹಾಗಾಗಿ, ಇಲ್ಲಿ ಬಿಜೆಪಿ ಗೆಲುವು ಬಹುತೇಕ ಖಚಿತ ಎನ್ನಬಹುದಾಗಿದೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ (19 ಸುತ್ತು ಸೇರಿ)
*ಅಶೋಕ ಮನಗೂಳಿ (ಕಾಂಗ್ರೆಸ್): 56,487
*ರಮೇಶ ಭೂಸನೂರ (ಬಿಜೆಪಿ):84,650
*ನಾಜಿಯಾ ಅಂಗಡಿ (ಜೆಡಿಎಸ್): 3729
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಜಿಲ್ಲೆ ಹಾವೇರಿಯ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. 10ನೇ ಸುತ್ತಿನ ಮತ ಎಣಿಕೆ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಬಿಜೆಪಿಯ ಶಿವರಾಜ ಸಜ್ಜನರ ಅವರಿಗಿಂತ 6,459 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು.
ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ (11 ಸುತ್ತು ಸೇರಿ)
ಬಿಜೆಪಿ- ಶಿವರಾಜ ಸಜ್ಜನರ- 44,178
ಕಾಂಗ್ರೆಸ್- ಶ್ರೀನಿವಾಸ ಮಾನೆ- 50,637
ಜೆಡಿಎಸ್- ನಿಯಾಜ್ ಶೇಖ್- 523
ಪಕ್ಷೇತರ- ನಜೀರ್ ಅಹಮದ್ ಸವಣೂರ- 570
ಇತ್ತೀಚಿನ ಮಾಹಿತಿಗೆ ಲೈವ್ ಬ್ಲಾಗ್ ನೋಡಿ.. Live| ವಿಧಾನಸಭಾ ಉಪಚುನಾವಣೆ ಮತ ಎಣಿಕೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.