ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸಿಬಿ ಎಸಿಪಿಯಾಗಿದ್ದ ಪ್ರಭುಶಂಕರ್ ವಿರುದ್ಧದ ಪ್ರಕರಣ ವಜಾ

Last Updated 22 ಸೆಪ್ಟೆಂಬರ್ 2021, 22:06 IST
ಅಕ್ಷರ ಗಾತ್ರ

ಬೆಂಗಳೂರು: ಸಿಸಿಬಿ ಎಸಿಪಿಯಾಗಿದ್ದ ಪ್ರಭುಶಂಕರ್ ವಿರುದ್ಧದ ಸುಲಿಗೆ ಮತ್ತು ಭ್ರಷ್ಟಾಚಾರ ಪ್ರಕರಣವನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಸಿಸಿಬಿಯಲ್ಲಿ ಎಸಿಪಿಯಾಗಿದ್ದ ಪ್ರಭುಶಂಕರ್ ಮತ್ತು ಇಬ್ಬರು ಇನ್‌ಸ್ಪೆಕ್ಟರ್‌ಗಳು 2020ರ ಲಾಕ್‌ಡೌನ್ ಅವಧಿಯಲ್ಲಿಸಿಗರೇಟ್ ವಿತರಕರಿಂದ ಹಣ ಸುಲಿಗೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಅಮಾನತುಗೊಂಡಿದ್ದರು.

‘ಆರೋಪಿತರಿಂದ ಯಾವುದೇ ಹಣ ವಶಕ್ಕೆ ಪಡೆಯದಿದ್ದರೂ ಮಹಜರ್ ದಾಖಲೆ ಸೃಷ್ಟಿಸಲಾಗಿದೆ. ಸುಲಿಗೆಯಾಗಿದೆ ಎನ್ನಲಾದ ವ್ಯಕ್ತಿ ದೂರು ನೀಡದಿದ್ದರೂ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಲಾಗಿದೆ. ಇವೆಲ್ಲವನ್ನೂ ಗಮನಿಸಿದರೆ ಅಧಿಕಾರಿಗಳ ನಡುವಿನ ಜಗಳಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ಪ್ರಯತ್ನದಂತೆ ಕಾಣಿಸುತ್ತಿದೆ’ ಎಂದು ನ್ಯಾಯಮುರ್ತಿ ಎಚ್.ಪಿ. ಸಂದೇಶ್ ಅವರಿದ್ದ ಪೀಠ ಹೇಳಿತು.

‘ಎಫ್‌ಐಆರ್‌ ರದ್ದುಗೊಳಿಸುವುದು ಉಸಿರಾಟ ಆರಂಭಿಸದ ಮಗುವನ್ನು ಕೊಲೆ ಮಾಡಿದಂತೆ’ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಅಭಿಪ್ರಾಯಪಟ್ಟರು. ‘ಮಗು ಕಾನೂನು ಬದ್ಧವಾಗಿ ಜನಿಸಬೇಕೇ ಹೊರತು ದಾಖಲೆಗಳನ್ನು ಸೃಷ್ಟಿಸುವುದರಿಂದ ಅಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT