ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ವರ್ಗ: ಪರಿಷ್ಕೃತ ವೇಳಾಪಟ್ಟಿ

Last Updated 23 ಅಕ್ಟೋಬರ್ 2021, 21:15 IST
ಅಕ್ಷರ ಗಾತ್ರ

ಬೆಂಗಳೂರು: 2020–21ನೇ ಸಾಲಿನ ಶಿಕ್ಷಕರ (ಪ್ರಾಥಮಿಕ ಹಾಗೂ ಪ್ರೌಢ) ವರ್ಗಾವಣೆಯ ಪರಿಷ್ಕೃತ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ.

2019– 20ನೇ ಸಾಲಿನಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣೆಗೆ ಒಳಗಾದ ಪ್ರಾಥಮಿಕ ಶಿಕ್ಷಕರಿಗೆ ಆನ್‌ಲೈನ್‌ ಕೌನ್ಸೆಲಿಂಗ್ ಇದೇ 26ರಿಂದ, ಪ್ರೌಢ ಶಿಕ್ಷಕರಿಗೆ ಇದೇ 28ರಿಂದ ಆರಂಭವಾಗಲಿದೆ.

ಜೂನ್‌ 30ರಂದು ಹೊರಡಿಸಿದ್ದ ವರ್ಗಾವಣೆ ಅಧಿಸೂಚನೆಗೆ ನೀಡಿದ್ದ ತಡೆಯಾಜ್ಞೆಯನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಇತ್ತೀಚೆಗೆ ತೆರವುಗೊಳಿಸಿತ್ತು. ಹೀಗಾಗಿ ಇದೀಗ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಐದು ವರ್ಷ ಪೂರ್ಣಗೊಳಿಸಿದ ಸಿಆರ್‌ಪಿ (ಸಮೂಹ ಸಂಪನ್ಮೂಲ ವ್ಯಕ್ತಿ) ಮತ್ತು ಬಿಆರ್‌ಪಿಗಳ (ಕ್ಷೇತ್ರ ಸಂಪನ್ಮೂಲ ವ್ಯಕ್ತಿ) ಕೌನ್ಸೆಲಿಂಗ್‌ ಮೊದಲ ಹಂತ ನ. 2ರಿಂದ, ಎರಡನೇ ಹಂತ ಜ. 18ರಿಂದ, ಮೂರು ವರ್ಷ ಪೂರ್ಣಗೊಳಿಸಿದ ಸಿಆರ್‌ಪಿ ಮತ್ತು ಬಿಆರ್‌ಪಿಗಳ ಕೌನ್ಸೆಲಿಂಗ್‌ ಮೊದಲ ಹಂತ ಡಿ. 2ರಿಂದ, ಎರಡನೇ ಹಂತ ಜ. 30ರಿಂದ ನಡೆಯಲಿದೆ.

ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್ ಮೊದಲ ಹಂತದ ನ. 24ರಿಂದ ಡಿ. 2ವರೆಗೆ, ಎರಡನೇ ಹಂತ ಜ. 19ರಿಂದ 27ರವರೆಗೆ ನಡೆಯಲಿದೆ. ಜಿಲ್ಲೆಯೊಳಗಿನ ಪರಸ್ಪರ ವರ್ಗಾವಣೆಗೆ ಮೊದಲಹಂತ ನ. 19, ಎರಡನೇ ಹಂತ ಜ.19, ವಿಭಾಗದ ಒಳಗೆ ಒಂದು ಘಟಕದಿಂದ ಮತ್ತೊಂದು ಘಟಕಕ್ಕೆ ಡಿ. 16ರಿಂದ ಕೌನ್ಸೆಲಿಂಗ್‌ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT