ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಪದವೀಧರ ಕ್ಷೇತ್ರ| ಬದಲಾವಣೆಗಿದು ಸಕಾಲ: ಪಕ್ಷೇತರ ಅಭ್ಯರ್ಥಿ ಗುರಿಕಾರ

Last Updated 23 ಅಕ್ಟೋಬರ್ 2020, 1:27 IST
ಅಕ್ಷರ ಗಾತ್ರ

*ಮತದಾರರು ನಿಮ್ಮನ್ನು ಯಾಕೆ ಆಯ್ಕೆ ಮಾಡಬೇಕು?

ಪದವೀಧರರ ಸಮಸ್ಯೆಗಳ ಅರಿವು ನನಗಿದೆ. ಶಾಸನಾತ್ಮಕ ಹಾಗೂ ಆಡಳಿತಾತ್ಮಕ ನಿರ್ಣಯಗಳನ್ನು ಕೈಗೊಳ್ಳುವಾಗ ಒಂದು ಸ್ಪಷ್ಟ ನಿಲುವಿನ ಅಗತ್ಯವಿರುತ್ತದೆ. ಅಂತ ಸಲಹೆ ಸೂಚನೆಗಳನ್ನು ನೀಡಲು, ಸಂಘಟನೆಯ ಹಿನ್ನೆಲೆಯಿಂದ ಬಂದ ನನಗೆ ಸುಲಭವಾಗಿದೆ. ಸರ್ವರ ಹಿತಾಸಕ್ತಿಗಾಗಿ ನನ್ನನ್ನು ಆಯ್ಕೆ ಮಾಡುವುದು ಸೂಕ್ತವಾಗಿದೆ.

*ಗೆಲುವಿನತ್ತ ಕರೆದೊಯ್ಯ ಬಹುದಾದ ಕಾರಣಗಳು ಯಾವವು?

ನಿರುದ್ಯೋಗಿ ಪದವೀಧರರ ಸಂಖ್ಯೆ ಹೆಚ್ಚಿದೆ. ಡಿ.ದೇವರಾಜ ಅರಸು ಅವರ ನಂತರ ಯಾರೂ ಅವರ ಸಮಸ್ಯೆಗಳನ್ನು ಅರಿಯಲು ಹೋಗಲಿಲ್ಲ. ನಿರುದ್ಯೋಗ ಭತ್ಯೆ ನೀಡಬೇಕು. ಶುಲ್ಕರಹಿತ ಪರೀಕ್ಷೆಗಳನ್ನು ಏರ್ಪಡಿಸಬೇಕು. ಬಹುತೇಕ ಪದವೀಧರರಲ್ಲಿ ಅರ್ಹತೆ ಹಾಗೂ ಪ್ರತಿಭೆ ಇದ್ದರೂ ಶುಲ್ಕ ಭರಿಸಲು ಹಣವಿಲ್ಲದೆ, ಪರೀಕ್ಷೆಗಳನ್ನು ಬರೆಯಲಾಗುವುದಿಲ್ಲ. ಇಂಥವರು ಬಹುಸಂಖ್ಯಾತದಲ್ಲಿದ್ದಾರೆ. ಇವರಿಗೆಲ್ಲ ಭತ್ಯೆ ನೀಡುವ ಯೋಜನೆ ಪುನರಾರಂಭಿಸಲು ಪ್ರಯತ್ನಿಸುವೆ. ಇಂಥ ಬಡ ಪದವೀಧರ ನಿರುದ್ಯೋಗಿಗಳ ಧ್ವನಿಯಾಗಲಿರುವುದು ನನ್ನ ಗೆಲುವಿನ ನಡೆಯನ್ನು ಸಲೀಸುಗೊಳಿಸಲಿದೆ.

*ಮತದಾರರ ಒಲವು ಯಾವ ಕಡೆ ಇದೆ?

ನಾನು ಪಕ್ಷಾತೀತ ವ್ಯಕ್ತಿ. ಶಿಕ್ಷಕ ಸಂಘದ ಹಿನ್ನೆಲೆಯಿಂದ ಬಂದವನು. ಶಿಕ್ಷಕರ ಬೆಂಬಲ ನನಗಿದೆ. ಅದಕ್ಕೂ ಮಿಗಿಲಾಗಿ ನಾನು ಯಾವ ಪಕ್ಷಕ್ಕೂ ಸೇರಿದವನಲ್ಲ. ಪದವೀಧರರ ಪರ ಇರುವ ವ್ಯಕ್ತಿ. ಹೀಗಾಗಿ ನೇರ ಒಲವು ನನ್ನ ಕಡೆಯೇ ಇದೆ. ಬಹಿರಂಗವಾಗಿ ಇದನ್ನು ಹೇಳಲಾರರು. ಆದರೆ ಪ್ರಾಶಸ್ತ್ಯಮತಗಳಲ್ಲಿ ಇದು ಸಾಬೀತಾಗಲಿದೆ. ಸದ್ಯಕ್ಕೆ ಕೇವಲ ನಾಲ್ಕು ಜಿಲ್ಲೆಗಳಲ್ಲಿ ಈ ಸ್ಪರ್ಧೆ ಇದೆ. ನಾನು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿಯೇ ಮತದಾರರ ಒಲವು ಗಳಿಸಿರುವ ಅನುಭವ ನನಗಿದೆ. ಕ್ರಿಯಾತ್ಮಕ ಹಾಗೂ ಸೃಜನಾತ್ಮಕ ಕಾರ್ಯಗಳಿಂದಾಗಿ ಶಿಕ್ಷಕ ವೃಂದ ನನ್ನನ್ನು ಗೆಲುವಿನತ್ತ ಹೆಜ್ಜೆ ಹಾಕಲು ಸಹಾಯ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT