ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಗಣತಿ ಬಗ್ಗೆ ಮಾತನಾಡಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Last Updated 22 ಆಗಸ್ಟ್ 2021, 8:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಜಾತಿ ಗಣತಿ ವಿಷಯ ಸದ್ಯ ಕೋರ್ಟ್‌ನಲ್ಲಿ ಇರುವುದರಿಂದ ಹೆಚ್ಚು ಮಾತನಾಡುವುದು ಸರಿಯಲ್ಲ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅಶೋಕನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, 'ಜಾತಿ ಗಣತಿ ವರದಿಯನ್ನು ಹಿಂದುಳಿದ ಆಯೋಗ ಸಹ ಪರಿಶೀಲಿಸುತ್ತಿದೆ. ಕೋರ್ಟ್‌ನಲ್ಲಿ ವಿಷಯ ಇರುವುದರಿಂದ ಇತ್ಯರ್ಥಕ್ಕೆ ಕಾಲಾವಕಾಶವಿದೆ. ಆ ಕುರಿತು ವಿರೋಧ ಪಕ್ಷದವರಷ್ಟೇ ಅಲ್ಲ, ಯಾರು ಬೇಕಾದರೂ ಪ್ರಧಾನಿ ಅವರನ್ನು ಭೇಟಿ ಆಗಬಹುದು' ಎಂದರು.

'ಗುಂಡು ಹಾಕಿದರೂ ಗಣೇಶ ಚತುರ್ಥಿ ಆಚರಣೆ ಮಾಡುತ್ತೇವೆ' ಎಂಬ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಗೆ ಮಾಧ್ಯದವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ, 'ಅವರ ಬಗ್ಗೆ ನಾನೇನು ಹೇಳುವುದಿಲ್ಲ. ಅವರನ್ನೇ ಕೇಳಿ' ಎಂದು ಪ್ರತಿಕ್ರಿಯಿಸಿದರು.

'ಸೆ. 3 ರಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ರಾಜಕೀಯದ ಕುರಿತು ಏನೂ ಮಾತನಾಡುವುದಿಲ್ಲ' ಎಂದರು.

ಸಿ.ಎಂ ನಿವಾಸದಲ್ಲಿ ರಕ್ಷಾ ಬಂಧನ ಸಂಭ್ರಮ:ಹುಬ್ಬಳ್ಳಿಯ ಸಿ.ಎಂ. ನಿವಾಸದಲ್ಲಿ ರಕ್ಷಾ ಬಂಧನ ಸಂಭ್ರಮ ಕಳೆಗಟ್ಟಿತ್ತು. ಬಸವರಾಜ ಬೊಮ್ಮಾಯಿ ಅವರಿಗೆ ಸಹೋದರಿಯರು ರಾಖಿ ಕಟ್ಟಿ ಸಂಭ್ರಮಿಸಿದರು. ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಹೋದರಿಯರು ರಾಖಿ ಕಟ್ಟಿ ಶುಭಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT