ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 115 ಮಂದಿಗೆ ಮುಖ್ಯಮಂತ್ರಿ ಪದಕ

Last Updated 24 ಮಾರ್ಚ್ 2021, 3:14 IST
ಅಕ್ಷರ ಗಾತ್ರ

ಬೆಂಗಳೂರು: ವೃತ್ತಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ ರಾಜ್ಯದ 115 ಪೊಲೀಸರಿಗೆ 2020ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆ ಮಾಡಲು ಪೊಲೀಸ್ ಇಲಾಖೆಯಿಂದ ಅನುಮೋದನೆ ನೀಡಲಾಗಿದ್ದು, ಏಪ್ರಿಲ್ ಎರಡನೇ ವಾರದಲ್ಲಿ ಪದಕ ಪ್ರದಾನ ಸಮಾರಂಭ ಜರುಗುವ ಸಾಧ್ಯತೆ ಇದೆ.

ಗೃಹ ಇಲಾಖೆಯ ನಿರ್ದೇಶನದಂತೆ ಪದಕಕ್ಕೆ ಅರ್ಹರಾದ ಪೊಲೀಸರ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.

ಎಸ್ಪಿ ಉಮಾ ಪ್ರಶಾಂತ್, ಎಸಿಪಿಗಳಾದ ಕೆ.ಎಸ್. ವೆಂಕಟೇಶನಾಯ್ಡು, ಸಿ.ಕೆ. ಅಶ್ವತ್ಥ ನಾರಾಯಣ, ಡಿವೈಎಸ್ಪಿಗಳಾದ ಪಿ.ಕೆ.ಮುರಳೀಧರ್, ಎಂ.ಜೆ. ಬಾಲಾಜಿ ಸಿಂಗ್, ಗೋಪಾಲ್ ಡಿ. ಜೋಗಿನ್, ಪ್ರಮೋದ್ ಢಗ್ಗೆ, ಟಿ.ಪಿ. ಕೃಷ್ಣಮೂರ್ತಿ, ಮಂಜುನಾಥ್ ಗುಂಜೀಕರ್ ಸೇರಿದಂತೆ ಹಲವು ಇನ್‌ಸ್ಪೆಕ್ಟರ್, ಪಿಎಸ್ಐ, ಕಾನ್‌ಸ್ಟೆಬಲ್‌ಗಳ ಹೆಸರು ಪಟ್ಟಿಯಲ್ಲಿದೆ.

ಪಟ್ಟಿ ಸಮೇತ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ತುರ್ತು ಸಂದೇಶ ಕಳುಹಿಸಿರುವ ಆಡಳಿತ ವಿಭಾಗದ ಎಡಿಜಿಪಿ ಡಾ. ಎಂ.ಎ. ಸಲೀಂ, ‘115 ಅಧಿಕಾರಿ/ಸಿಬ್ಬಂದಿಯನ್ನು ಮುಖ್ಯಮಂತ್ರಿ ಪದಕಕ್ಕೆ ಅನುಮೋದಕ್ಕೆ ಮಾಡಲಾಗಿದೆ. ಪದಕಕ್ಕೆ ಆಯ್ಕೆ ಮಾಡಲಾದ ಅಧಿಕಾರಿ/ಸಿಬ್ಬಂದಿ ಹೆಸರು, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ ಹಾಗೂ ಇತರೆ ಮಾಹಿತಿಯಲ್ಲಿ ಬದಲಾವಣೆ ಇದ್ದರೆ ಮಾ. 25ರೊಳಗಾಗಿ ತಿಳಿಸಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT