ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನನ್ನು ದೇವರನ್ನಾಗಿಸಬೇಡಿ: ಸಿಎಂ ಬೊಮ್ಮಾಯಿ

ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಹೇಳಿಕೆ
Last Updated 7 ಮೇ 2022, 19:11 IST
ಅಕ್ಷರ ಗಾತ್ರ

ಬೆಂಗಳೂರು: ‘ಬಸವಣ್ಣನವರುಕಾಯಕದಲ್ಲೇ ಸ್ವರ್ಗ ಕಾಣುವ, ಸಮಾನತೆ, ಸಮಾನ ಅವಕಾಶಗಳನ್ನು ಒದಗಿಸುವ ಸಮಾಜ ಬಯಸಿದ್ದರು. ನಮ್ಮ ಸರ್ಕಾರವೂ ಬಸವಪಥದಲ್ಲೇ ಮುನ್ನಡೆಯುತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬಸವ ವೇದಿಕೆ ವತಿಯಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಸವ ಜಯಂತಿ, ರಜತ ಮಹೋತ್ಸವ ಮತ್ತು ‘ಬಸವಶ್ರೀ’, ವಚನ ಸಾಹಿತ್ಯಶ್ರೀ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್ಕಾರ ಜನರಿಗೆ ದುಡಿಯುವ ಅವಕಾಶಗಳನ್ನು ಕಲ್ಪಿಸುತ್ತಿದೆ. ಆರ್ಥಿಕತೆ ಎಂದರೆ ದುಡ್ಡಲ್ಲ. ಅದು ಜನರ ದುಡಿಮೆ. ದೇಶವನ್ನು ರೈತರು ಮತ್ತು ಕಾರ್ಮಿಕರು ಕಟ್ಟುತ್ತಿದ್ದಾರೆ. ಕರ್ತವ್ಯಕ್ಕೂ ಕಾಯಕಕ್ಕೂ ವ್ಯತ್ಯಾಸವಿಲ್ಲ. ಕಾಯಕವನ್ನು ನಿಷ್ಠೆಯಿಂದ ಮಾಡಿದರೆ ಅದೇ ಸ್ವರ್ಗ ಎಂಬ ಬಸವಣ್ಣನವರ ತತ್ವಪಾಲಿಸಲಾಗುತ್ತಿದೆ’ ಎಂದರು.

‘ಇಂದಿನ ಎಲ್ಲ ಸಮಸ್ಯೆಗಳಿಗೂಬಸವಣ್ಣ ತನ್ನ ವಚನಗಳಲ್ಲಿ ಪರಿಹಾರ ನೀಡಿದ್ದಾರೆ. ಆದರೆ, ಆ ವಚನಗಳನ್ನು ಪಾಲಿಸುವಲ್ಲಿ ನಾವೆಲ್ಲ ಎಷ್ಟರಮಟ್ಟಿಗೆ ಹಿಂದುಳಿದಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಸವಣ್ಣನವರು ನಮ್ಮಂತೆ ಮನುಷ್ಯರಾಗಿಯೇ ಹುಟ್ಟಿದ್ದು, ಅವರನ್ನು ದೇವರನ್ನಾಗಿ ಮಾಡಬೇಡಿ.ಒಬ್ಬ ಸಾಮಾನ್ಯ ಸನ್ಮಾರ್ಗದಲ್ಲಿ ನಡೆದರೆ ದೇವಮಾನವ ಆಗಬಲ್ಲ ಎಂದು ತೋರಿಸಿರುವಬಸವಣ್ಣನವರು ಈಗಾಗಲೇ ದೇವರ ಸ್ಥಾನದಲ್ಲಿದ್ದಾರೆ’ ಎಂದರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ,‘ದೇಶದಲ್ಲಿ ಈಗ ಎಲ್ಲವನ್ನೂ ವಿರೋಧಿಸುವ ಬಣ ಹುಟ್ಟಿ
ಕೊಂಡಿದೆ. ಪ್ರಧಾನಿ ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ಸಾಧನೆಯನ್ನು ವಿರೋಧಿಸುತ್ತಿದ್ದಾರೆ. ಅಭಿವೃದ್ಧಿ ಕಾರ್ಯ
ಗಳನ್ನು ಸ್ವಾಗತಿಸಬೇಕು’ ಎಂದರು.

ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ಬಸವಣ್ಣನವರು ತಮ್ಮ ಬದುಕನ್ನೇ ಪ್ರಯೋಗಶಾಲೆಯಂತೆ ಮಾಡಿ
ಕೊಂಡಿದ್ದರು. ಈಗಿನ ಸಮಾಜ ಅವರ ಆದರ್ಶಗಳನ್ನು ಪಾಲಿಸಿದ್ದರೆ ಇಂದು ರಷ್ಯಾ–ಉಕ್ರೇನ್‌ ಯುದ್ಧ ನಡೆಯುತ್ತಿ
ರಲಿಲ್ಲ’ ಎಂದರು.

ಬಸವ ವೇದಿಕೆ ಅಧ್ಯಕ್ಷ ಸಿ.ಸೋಮಶೇಖರ್, ವಿಧಾನಸೌಧದ ಮೇಲೆ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಬರೆಯಲಾಗಿದೆ. ಅದೇ ರೀತಿ ಬೆಳಗಾವಿಯ ಸುವರ್ಣ ವಿಧಾನಸೌಧದ ಮೇಲೆ ಕಾಯಕವೇ ಕೈಲಾಸ ಎಂದು ಬರೆಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT