ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಸೇರಿ ರಾಜ್ಯದ ವಿವಿಧೆಡೆ ಉತ್ತಮ ಮಳೆ

Last Updated 23 ಜೂನ್ 2022, 18:40 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಕೂಡ ಉತ್ತಮ ಮಳೆಯಾಗಿದೆ.ಮಂಗಳೂರು ತಾಲ್ಲೂಕಿನ ಮೂಲ್ಕಿ ಹೋಬಳಿಯಲ್ಲಿ 48.2 ಮಿ.ಮೀ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಗಿರಿಶ್ರೇಣಿ, ಆಲ್ದೂರು, ಕಳಸ ಭಾಗದಲ್ಲಿ ಮಳೆಯಾಗಿದೆ. ನಗರದ ಮತ್ತು ಸುತ್ತಲಿನ ಪ್ರದೇಶದಲ್ಲಿ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ಸುಮಾರು 20 ನಿಮಿಷ ಸಾಧಾರಣ ಮಳೆ ಸುರಿಯಿತು.

ಕರಾವಳಿ ಭಾಗದಲ್ಲಿ ಬೆಳ್ತಂಗಡಿ ತಾಲ್ಲೂಕಿನಲ್ಲಿ 25.9 ಮಿ.ಮೀ, ಬಂಟ್ವಾಳ 16.8 ಮಿ.ಮೀ, ಮಂಗಳೂರು 28.6 ಮಿ.ಮೀ, ಪುತ್ತೂರು 22.7 ಮಿ.ಮೀ, ಸುಳ್ಯ 12.6 ಮಿ.ಮೀ, ಮೂಡುಬಿದಿರೆ 38.3 ಮಿ.ಮೀ, ಕಡಬ ತಾಲ್ಲೂಕಿನಲ್ಲಿ 14.7 ಮಿ.ಮೀ ಮಳೆ ದಾಖಲಾಗಿದೆ.

ಕಾರವಾರ ವರದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಕರಾವಳಿಯಲ್ಲಿ ಒಂದೆರಡು ಸಲ ಸಾಧಾರಣಮಳೆಬಂತು. ಶಿರಸಿ, ಸಿದ್ದಾಪುರ ತಾಲ್ಲೂಕುಗಳ ಕೆಲವೆಡೆ ವರ್ಷಧಾರೆಯಾಯಿತು.

ಜೂನ್ 28ರವರೆಗೆ ರಾಜ್ಯದ ಕರಾವಳಿಯಲ್ಲಿ ಆಗಾಗ ಜೋರಾಗಿ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯು ‘ಯೆಲ್ಲೊ ಅಲರ್ಟ್’ ಮುನ್ಸೂಚನೆ ನೀಡಿದೆ.ಕೊಪ್ಪಳ ಜಿಲ್ಲೆಯ ಕುಷ್ಟಗಿ ಮತ್ತು ತಾವರಗೇರಾದ ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ತುಂತುರು ಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT