ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಿಷನ್ ಪಡೆದವರ ತನಿಖೆಗೆ ಆಯೋಗ ರಚಿಸಲಿ: ಡಾ.ಜಿ.ಪರಮೇಶ್ವರ್

ಕುಮಾರಸ್ವಾಮಿ ಹೇಳಿಕೆಗೆ ಪರಮೇಶ್ವರ್ ತಿರುಗೇಟು
Last Updated 16 ಏಪ್ರಿಲ್ 2022, 20:01 IST
ಅಕ್ಷರ ಗಾತ್ರ

ಮಂಗಳೂರು: ‘ಹಿಂದೆ ಯಾರೆಲ್ಲ ಕಮಿಷನ್ ಪಡೆದಿದ್ದಾರೆ ಎಂಬ ಬಗ್ಗೆ ಆಯೋಗ ರಚಿಸಿ ತನಿಖೆ ನಡೆಸಲಿ’ ಎಂದು ಶಾಸಕ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದರು.

‘ಕಾಂಗ್ರೆಸ್ ಅವಧಿಯಲ್ಲಿ ಕಮಿಷನ್ ಇರಲಿಲ್ಲವೇ’ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ‘ಈ ಮೂಲಕ ಕಮಿಷನ್ ಆರೋಪವನ್ನು ಕುಮಾರಸ್ವಾಮಿ ಸಮರ್ಥನೆ ಮಾಡಿಕೊಂಡಂತಾಗಿದೆ. ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಹಲವು ಸರ್ಕಾರಗಳು ಆಡಳಿತ ನಡೆಸಿವೆ. ಏನೆಲ್ಲ ಆಗಿವೆ ಎಂಬ ಬಗ್ಗೆ ಆಯೋಗದ ಮೂಲಕ ತನಿಖೆ ನಡೆಯಲಿ’ ಎಂದರು.

‘ಸಿದ್ದರಾಮಯ್ಯ, ಎಸ್.ಎಂ. ಕೃಷ್ಣ, ಬಿಜೆಪಿಯವರೇ ಆದ ಯಡಿಯೂರಪ್ಪ ಇದ್ದಾಗಿನ ಅವಧಿಯ ತನಿಖೆಯನ್ನೂ ಮಾಡಿಸಿ ಯಾರು ಬೇಡ ಅಂದಿದ್ದು’ ಎಂದರು.

‘ಕೆ.ಜೆ.ಜಾರ್ಜ್ ಪ್ರಕರಣ ಹಾಗೂ ಈಶ್ವರಪ್ಪ ಪ್ರಕರಣ ಬೇರೆ ಬೇರೆಯಾಗಿದ್ದು, ಆರೋಪ ಬಂದ ಕೂಡಲೇ ಜಾರ್ಜ್ ರಾಜೀನಾಮೆ ನೀಡಿದ್ದರು. ಸಿಬಿಐ ತನಿಖೆ ಕೂಡ ನಡೆಯಿತು. ಸಂತೋಷ್ ಪಾಟೀಲ ಪ್ರಕರಣವೂ ತನಿಖೆಯಾಗಲಿ. ಸದ್ಯ ಪ್ರಮುಖ ಆರೋಪಿಯನ್ನು ಬಂಧಿಸಲಿ’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT