ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯವ್ಯ ಶಿಕ್ಷಕರ ಕ್ಷೇತ್ರ: ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ 1,702 ಮತ ಮುನ್ನಡೆ

Last Updated 15 ಜೂನ್ 2022, 10:00 IST
ಅಕ್ಷರ ಗಾತ್ರ

ಬೆಳಗಾವಿ: ವಾಯವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರು ಮೊದಲ ಸುತ್ತಿನಲ್ಲಿ 1702 ಮತಗಳ ಮುನ್ನಡೆ ಸಾಧಿಸಿದರು. ಇದರಿಂದ ಅವರ ಬೆಂಬಲಿಗರು ಮತ ಎಣಿಕೆ ಕೇಂದ್ರದ ಆಚೆಗೆ ಸಂಭ್ರಮಾಚರಣೆ ಮಾಡಿದರು.

ಮೊದಲ ಸುತ್ತಿನ ಎಣಿಕೆಯಲ್ಲಿ ಪ್ರಕಾಶ ಹುಕ್ಕೇರಿ ಅವರಿಗೆ 4,826 ಮತಗಳು ಬಂದಿದ್ದು, ಸಮೀಪದ ಸ್ಪರ್ಧಿ ಬಿಜೆಪಿ ಅರುಣ ಶಹಾಪುರ ಅವರಿಗೆ 3,124 ಮತ ಬಂದಿವೆ.

ಪ್ರಕಾಶ ಹುಕ್ಕೇರಿ ಅವರು ಮಧ್ಯಾಹ್ನ 2ರವರೆಗೂ ಮತ ಎಣಿಕೆ ಕೇಂದ್ರಕ್ಕೆ ಬಂದಿರಲಿಲ್ಲ. ಆದರೆ, ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಬೆಳಿಗ್ಗೆ 8ರಿಂದಲೇ ಎಣಿಕೆ ಟೇಬಲ್ ಮುಂದೆ ಠಿಕಾಣಿ ಹೂಡಿದ್ದರು. ಮೊದಲ ಸುತ್ತಿನಲ್ಲಿ ಪ್ರಕಾಶ ಹುಕ್ಕೇರಿ ಮುನ್ನಡೆ ಸಾಧಿಸಿದ್ದನ್ನು ಗಮನಿಸಿದ ಅರುಣ ಅವರು, ಎಣಿಕೆ ಕೆಂದ್ರದಿಂದ ಹೊರನಡೆದದರು.

ಈ ವೇಳೆ ಕೇಂದ್ರದ ಹೊರಗೆ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಕೂಡ ಹೋದರು.

ಇನ್ನೊಂದೆಡೆ, ಪ್ರಕಾಶ ಹುಕ್ಕೇರಿ ಅವರ ಕೆಲವು ಬೆಂಬಲಿಗರು ಫಲಿತಾಂಶ ಬರುವುದಕ್ಕೂ ಮುನ್ನವೇ ಸಂಭ್ರಮಾಚರಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT