ಅಂತರರಾಷ್ಟ್ರೀಯ ಯೋಗ ದಿನ: ಯೋಗ ಪ್ರಚಾರಕ್ಕಲ್ಲ, ಆರೋಗ್ಯಕ್ಕಾಗಿ ಎಂದ ಸಿದ್ದರಾಮಯ್ಯ

ಬೆಂಗಳೂರು: ಅಂತರರಾಷ್ಟ್ರೀಯ ಯೋಗ ದಿನ ಪ್ರಯುಕ್ತ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಯೋಗ ಪ್ರಚಾರಕ್ಕಲ್ಲ, ಆರೋಗ್ಯಕ್ಕಾಗಿ’ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಮೈಸೂರು: ಉತ್ಸಾಹದ ಯೋಗ ದಿನ– 45 ನಿಮಿಷ ವಿವಿಧ ಆಸನಗಳನ್ನು ಮಾಡಿದ ಪ್ರಧಾನಿ ಮೋದಿ
‘ಶ್ರದ್ಧೆ, ಬದ್ಧತೆ ಮತ್ತು ಸಹೃದಯತೆಯಿಂದ ಬೌದ್ಧಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಯೋಗ ಮಾಡೋಣ. ಯೋಗ ಪ್ರಚಾರಕ್ಕಲ್ಲ, ಆರೋಗ್ಯಕ್ಕಾಗಿ. ಸರ್ವರಿಗೂ ಅಂತರರಾಷ್ಟ್ರೀಯ ಯೋಗ ದಿನದ ಶುಭಾಶಯಗಳು’ ಎಂದು ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಶ್ರದ್ಧೆ, ಬದ್ಧತೆ ಮತ್ತು ಸಹೃದಯತೆಯಿಂದ ಬೌದ್ಧಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಯೋಗ ಮಾಡೋಣ.
ಯೋಗ ಪ್ರಚಾರಕ್ಕಲ್ಲ, ಆರೋಗ್ಯಕ್ಕಾಗಿ.
ಸರ್ವರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.#InternationalDayofYoga pic.twitter.com/OHF6SoagqJ
— Siddaramaiah (@siddaramaiah) June 21, 2022
ಜೂನ್ 21 ಅನ್ನು ಪ್ರತಿ ವರ್ಷ ಅಂತರರಾಷ್ಟ್ರೀಯ ಯೋಗ ದಿನವೆಂದು ಆಚರಿಸಲಾಗುತ್ತಿದೆ. ಈ ವರ್ಷ 8ನೇ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದ್ದು, ಮೈಸೂರಿನಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ.
ಇವನ್ನೂ ಓದಿ...
ಅಂತರರಾಷ್ಟ್ರೀಯ ಯೋಗ ದಿನ | ಯೋಗದಿಂದ ನಿರೋಗ ಸಾಧ್ಯ; ಮೈಸೂರಿನಲ್ಲಿ ಪ್ರಧಾನಿ ಮೋದಿ
ಪಾಕ್: ಹೆರಿಗೆ ವೇಳೆ ಶಿಶು ತಲೆ ಕತ್ತರಿಸಿ ಗರ್ಭದಲ್ಲೇ ಬಿಟ್ಟ ಆಸ್ಪತ್ರೆ ಸಿಬ್ಬಂದಿ!
ಐದು ಅಡಿ ಉದ್ದದ ಕೊಳಕ ಮಂಡಲವನ್ನು ನುಂಗಿದ ದೈತ್ಯ ನಾಗರ ಹಾವು: ವಿಡಿಯೊ ವೈರಲ್
ಥೈಲ್ಯಾಂಡ್ನಲ್ಲಿ ನಯನತಾರಾ– ವಿಘ್ನೇಶ್ ಹನಿಮೂನ್: ಹೊಸ ಫೋಟೊ ವೈರಲ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.