ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೆ ವಿರೋಧವಿಲ್ಲ: ಖಾದರ್‌

Last Updated 19 ಮಾರ್ಚ್ 2022, 22:07 IST
ಅಕ್ಷರ ಗಾತ್ರ

ಬಳ್ಳಾರಿ: ‘ಶಾಲಾ ಪಠ್ಯದಲ್ಲಿ ಭಗವದ್ಗೀತೆಯ ಅಂಶಗಳನ್ನು ಸೇರ್ಪಡೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಎಲ್ಲ ಧರ್ಮಗಳಲ್ಲಿರುವ ಒಳ್ಳೆಯ ಅಂಶಗಳನ್ನೂ ಸೇರಿಸಿ ಮಕ್ಕಳಿಗೆ ಮೌಲಿಕ ಶಿಕ್ಷಣ ಕೊಡಲಿ’ ಎಂದು ಕಾಂಗ್ರೆಸ್‌ ನಾಯಕ, ಶಾಸಕ ಯು.ಟಿ. ಖಾದರ್‌ ಸಲಹೆ ಮಾಡಿದರು.

ಬಳ್ಳಾರಿ ಮೇಯರ್‌ ಉಪ ಮೇಯರ್‌ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ವೀಕ್ಷಕರಾಗಿ ಬಂದಿದ್ದ ಖಾದರ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಪಠ್ಯದಲ್ಲಿ ಭಗವದ್ಗೀತೆ ಅಷ್ಟೇ ಅಲ್ಲ, ವಚನ ಸಾಹಿತ್ಯ, ನಾರಾಯಣಗುರು ಅವರ ಚಿಂತನೆ, ಕೋಟಿ ಚನ್ನಯ್ಯನವರ ವಿಚಾರ ಸೇರಿದಂತೆ ಎಲ್ಲ ಧರ್ಮಗಳ ಉತ್ತಮ ಅಂಶಗಳನ್ನು ಸೇರಿಸಿ ಮಕ್ಕಳ ವ್ಯಕ್ತಿತ್ವ ವಿಕಸನಗೊಳಿಸಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT