ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌: ಲಿಂಗಾಯತ ನಾಯಕರ ಸಭೆ

Last Updated 23 ಸೆಪ್ಟೆಂಬರ್ 2021, 22:17 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ನ ಒಕ್ಕಲಿಗ ಸಮುದಾಯದ ನಾಯಕರು ಬುಧವಾರ ರಾತ್ರಿ ಸಭೆ ಸೇರಿದ ಬೆನ್ನಲ್ಲೇ, ಪಕ್ಷದಲ್ಲಿ ಸಕ್ರಿಯರಾಗಿರುವ ಲಿಂಗಾಯತ ಸಮುದಾಯದ ಎರಡನೆಯ ಹಂತದ ನಾಯಕರು ಗುರುವಾರ ಸಭೆ ನಡೆಸಿದ್ದಾರೆ.

ಕಾಂಗ್ರೆಸ್‌ ಯುವ ನಾಯಕ ಬಸವನಗೌಡ ಬಾದರ್ಲಿ ನೇತೃತ್ವದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರು, ಯುವ ಮುಖಂಡರು ಭಾಗವಹಿಸಿದ್ದರು.

ಪಕ್ಷದಲ್ಲಿ ಹುದ್ದೆ ನೀಡುವಾಗ, ಚುನಾವಣೆ ತಯಾರಿ ಹಾಗೂ ಸಂಘಟನೆಯ ವಿಚಾರದಲ್ಲಿ ಕಡೆಗಣಿಸಲಾಗುತ್ತಿದೆ. ಮೂರ್ನಾಲ್ಕು ಹಿರಿಯ ಲಿಂಗಾಯತ ನಾಯಕರನ್ನು ಬಿಟ್ಟರೆ ಉಳಿದವರಿಗೆ ಮನ್ನಣೆ ಸಿಗುತ್ತಿಲ್ಲ. ಈ ಬಗ್ಗೆ ವರಿಷ್ಠರ‌ ಗಮನ ಸೆಳೆಯುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಕಾಂಗ್ರೆಸ್‌ಗೆ ವೀರಶೈವ ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಕಾರ್ಯತಂತ್ರ ರೂಪಿಸುವುದು, ಈ ಬಗ್ಗೆ ಮಠಾಧೀಶರ ಮನವೊಲಿಸುವುದು, ಎರಡನೇ ಹಂತದ ನಾಯಕರಿಗೆ ಪಕ್ಷದಲ್ಲಿ ಪ್ರಾತಿನಿಧ್ಯ ನೀಡುವ ಜೊತೆಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಪಡೆಯುವುದು, ಕೆಪಿಸಿಸಿ ಮತ್ತು ಎಐಸಿಸಿ ಮಟ್ಟದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯುವಾಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವುದು, ಎಂಬ ವಿಷಯಗಳ‌ ಕುರಿತು ಚರ್ಚೆ ನಡೆಯಿತು.

ಸಭೆ ಬಳಿಕ‌ ಮಾತನಾಡಿದ ಬಾದರ್ಲಿ, 'ಕಾಂಗ್ರೆಸ್ ನಲ್ಲಿರುವ ವೀರಶೈವ ಲಿಂಗಾಯತ ನಾಯಕರ ಸಭೆ ಮಾಡಿದ್ದೇವೆ. ಪಕ್ಷಕ್ಕೆ ವೀರಶೈವ ಲಿಂಗಾಯತರನ್ನು ಸೆಳೆಯುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಬಗ್ಗೆ ಚರ್ಚೆ ಮಾಡಿದ್ದೇವೆ' ಎಂದರು. ನಾಗರಾಜ್ ಛಬ್ಬಿ ಮಾತನಾಡಿದರು.

ಆನಂದ್ ಅಂಗಡಿಯವರ, ಗಡ್ಡದೇವರಮಠ, ಶರಣಪ್ಪ ಮಟ್ಟೂರು, ಚಂದ್ರಶೇಖರ ಪಾಟೀಲ, ಅಲ್ಲಮಪ್ರಭು ಪಾಟೀಲ, ಅನಿಲ್ ಪಾಟೀಲ್ , ಪ್ರಕಾಶ್ ಕೋಳಿವಾಡ, ಅನಿಲ್ ಕುಮಾರ್ ತಡಕಲ್, ಲತಾ ಎಂ.ಪಿ. ಪ್ರಕಾಶ್, ದಿನೇಶ್ ಶಿವಮೊಗ್ಗ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT