ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಕೊಡುಗೆ ಜನರು ಅರಿಯಲಿ: ಪ್ರಿಯಾಂಕ್ ಖರ್ಗೆ

ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಪಾದಯಾತ್ರೆಗೆ ಚಾಲನೆ
Last Updated 12 ಆಗಸ್ಟ್ 2022, 16:13 IST
ಅಕ್ಷರ ಗಾತ್ರ

ಕಲಬುರಗಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಆಯೋಜಿಸಿರುವ ಪಾದಯಾತ್ರೆಗೆ ಶಾಸಕರಾದ ಪ್ರಿಯಾಂಕ್ ಖರ್ಗೆ, ಡಾ. ಅಜಯ ಸಿಂಗ್ ಶುಕ್ರವಾರ ಚಾಲನೆ ನೀಡಿದರು.

ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಇಂದಿನ ಯುವ ಪೀಳಿಗೆಯು ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ಹೋರಾಟದಲ್ಲಿ ಮಾಡಿದ ಹೋರಾಟ, ತ್ಯಾಗ, ಬಲಿದಾನವನ್ನು ಮರೆತಿದೆ. ಬಿಜೆಪಿಯವರು ದೇಶಭಕ್ತಿ ತಾವೇ ಗುತ್ತಿಗೆ ಹಿಡಿದಂತೆ ಮಾತನಾಡುತ್ತಿದ್ದಾರೆ. ಆದ್ದರಿಂದ ಮೊದಲ ಪ್ರಧಾನಿ ಜವಹರಲಾಲ್ ನೆಹರು, ಡಾ.ಬಿ.ಆರ್. ಅಂಬೇಡ್ಕರ್, ಸರ್ದಾರ್ ವಲ್ಲಭಭಾಯ್ ಪಟೇಲ್, ಇಂದಿರಾಗಾಂಧಿ, ರಾಜೀವಗಾಂಧಿ ಸೇರಿ ಇನ್ನಿತರ ಮಹನೀಯರು ದೇಶಕ್ಕೆ ನೀಡಿದ ಕೊಡುಗೆ ಸ್ಮರಿಸಲು ಪಾದಯಾತ್ರೆ ನಡೆಸಲಾಗುತ್ತಿದೆ’ ಎಂದರು.

ಪಾದಯಾತ್ರೆಯು ಶರಣಬಸವೇಶ್ವರ ದೇವಸ್ಥಾನದಿಂದ ಹೊರಟು ಕುಂಬಾರಗಲ್ಲಿ, ದನಗರಗಲ್ಲಿ, ಬೋರಾಬಾಯಿ ನಗರ, ಅಶೋಕ ನಗರ, ವಡ್ಡರ ಗಲ್ಲಿ, ವಿದ್ಯಾನಗರ, ಶಾಂತಿನಗರ, ಸಿದ್ಧಾರ್ಥ ನಗರ, ಕಾಂತಾ ಕಾಲೊನಿ, ಬಿದ್ದಾಪುರ ಕಾಲೊನಿ, ಜೇವರ್ಗಿ ಕಾಲೊನಿ, ರಾಯರಗುಡಿ, ಜಯತೀರ್ಥ ಕಲ್ಯಾಣ ಮಂಟಪಕ್ಕೆ ತೆರಳಿ ಅಲ್ಲಿ ಮುಕ್ತಾಯವಾಯಿತು.‌

ಪಾದಯಾತ್ರೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಕುಮಾರ ಮೋದಿ, ಸಂತೋಷ ಪಾಟೀಲ ದೊಣ್ಣೂರ, ನೀಲಕಂಠರಾವ ಮೂಲಗೆ, ಕೆ.ಬಿ. ಕುಲಕರ್ಣಿ, ಡಾ.ಕಿರಣ ದೇಶಮುಖ, ಸಂತೋಷ ಬಿಲಗುಂದಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಹುಲಿಗೆಪ್ಪ ಕನಕಗಿರಿ, ಕೃಷ್ಣಾಜಿ ಕುಲಕರ್ಣಿ, ಶಿವಾನಂದ ಹೊನಗುಂಟಿ, ಲತಾ ರವಿ ರಾಠೋಡ, ಈರಣ್ಣ ಝಳಕಿ, ಲಿಂಗರಾಜ ತಾರಫೈಲ್, ಲಿಂಗರಾಜ ಕಣ್ಣಿ, ಶ್ರೀನಿವಾಸ ಲಾಖೆ, ರಾಜೀವ ಜಾನೆ, ಸಚಿನ್ ಶಿರವಾಳ, ಪರಶುರಾಮ ನಾಟೇಕಾರ, ಧರ್ಮರಾಜ ಹೇರೂರ, ಶ್ರೀಕಾಂತ ಮಾಳಗಿ ಹಾಗೂ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಶನಿವಾರ ಜಗತ್ ಸರ್ಕಲ್ ಮೂಲಕ ಆರಂಭವಾಗಿ ಬಸವಣ್ಣನವರು ಹಾಗೂ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು. ಗಾಜಿಪುರ, ಮಕ್ತಂಪುರ, ಮೈಲಾರಲಿಂಗೇಶ್ವರ ಗುಡಿ, ಜಗತ್ ಬಡಾವಣೆ, ಸುಂದರ ನಗರ, ಎಸ್‌ಟಿಬಿಟಿ, ಬಾಪು ನಗರ, ಹಳೆ ಆರ್‌ಟಿಒ ಕ್ರಾಸ್ ಮೂಲಕ ತೆರಳಿ ರಾಜಾಪುರಕ್ಕೆ ಮುಕ್ತಾಯವಾಗಲಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT