ಬೆಂಗಳೂರು: ಚಿಕ್ಕಮಗಳೂರಿನ ಎಐಟಿ ವೃತ್ತ ಸಮೀಪ ಭಾನುವಾರ ರಾತ್ರಿ ಅಪಘಾತಕೀಡಾಗಿದ್ದ ಶಾಸಕ ಸಿ.ಟಿ.ರವಿ ಅವರ ಬೆಂಬಲಿಗರದ್ದು ಎನ್ನಲಾಗುತ್ತಿರುವ ಕಾರಿನಲ್ಲಿ ಮದ್ಯದ ಪ್ಯಾಕೆಟ್‌ಗಳು ಪತ್ತೆಯಾಗಿದ್ದವು. ಇದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಸಿ.ಟಿ.ರವಿಗೂ.. ಓಟಿ ಮದ್ಯಕ್ಕೂ ಏನು ಸಂಬಂಧ? ಎಂದು ಕೇಳಿದೆ.
'ಸಿ.ಟಿ. ರವಿ ಬೆಂಬಲಿಗರ ಕಾರು ಅಪಘಾತವಾಗುತ್ತದೆ. ಅದರೊಳಗೆ ಮದ್ಯದ ರಾಶಿ, ಜೊತೆಗೊಂದು ಮಾರಕಾಸ್ತ್ರ ಇರುತ್ತದೆ. ಈ 'ಸಿಟಿ' ರವಿಗೂ, ಕಾರು ಆಘಾತಕ್ಕೂ, 'ಓಟಿ' ಮದ್ಯಕ್ಕೂ ಏನು ಈ ಜನ್ಮಾಂತರದ ಸಂಬಂಧ! ಧರ್ಮ, ಸಂಸ್ಕೃತಿಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿ ನಾಯಕರು ರಾತ್ರಿ ಹೊತ್ತಲ್ಲಿ ಮಾಡುವ ಅಸಲಿ ಧರ್ಮ ರಕ್ಷಣೆಯೇ ಬೇರೆ!' ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಭಾನುವಾರ ರಾತ್ರಿ ಕಾರು ಹಾಗೂ ಜೀಪ್ ನಡುವೆ ಅಪಘಾತವಾಗಿತ್ತು. ರವಿ ಚಿತ್ರವಿರುವ ಕ್ಯಾಲೆಂಡರ್‌ಗಳು, ಮದ್ಯದ ಪ್ಯಾಕೆಟ್‌ಗಳು, ಕತ್ತಿ (ಲಾಂಗ್) ಕಾರಿನಲ್ಲಿ ಪತ್ತೆಯಾಗಿವೆ. ಚಾಲಕ ಮಂಜುನಾಥ ಹಾಗೂ ಕಾರಿನಲ್ಲಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
'ಕಾರು ಮತ್ತು ಜೀಪು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಮದ್ಯದ ಪೊಟ್ಟಣಗಳು, ಕತ್ತಿ, ಶಾಸಕ ಸಿ.ಟಿ.ರವಿ ಭಾವಚಿತ್ರದ ಕ್ಯಾಲೆಂಡರ್‌ಗಳು ಪತ್ತೆಯಾಗಿವೆ. ಸ್ಥಳೀಯರು ಮತ್ತು ಕಾರಿನಲ್ಲಿದ್ದವರು ಪರಸ್ಪರ ವಾಗ್ವಾದ ನಡೆಸಿದ್ದಾರೆ. ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು ತನಿಖೆ ಪ್ರಗತಿಯಲ್ಲಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.