ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ಬರಬೇಕಿದ್ದ ಕೇಂದ್ರದ ಪಾಲಿನಲ್ಲಿ ಕಡಿತ: ಕಾಂಗ್ರೆಸ್ ಕಿಡಿ

Last Updated 24 ಮಾರ್ಚ್ 2022, 10:51 IST
ಅಕ್ಷರ ಗಾತ್ರ

ಬೆಂಗಳೂರು:ಕೇಂದ್ರ ಸರ್ಕಾರವು ತೆರಿಗೆ–ಸುಂಕ ರೂಪದಲ್ಲಿ ಕರ್ನಾಟಕಕ್ಕೆ ನ್ಯಾಯಯುತವಾಗಿ ನೀಡಬೇಕಾದ ಪಾಲಿನಲ್ಲಿ ಈ ವರ್ಷವೂ ಕಡಿತವಾಗಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.

ಕೇಂದ್ರ ಸರ್ಕಾರವು ತೆರಿಗೆ–ಸುಂಕ ಹಾಗೂ ಸಹಾಯಾನುದಾನದ ರೂಪದಲ್ಲಿ ಕರ್ನಾಟಕಕ್ಕೆ ನೀಡಬೇಕಾದ ಪಾಲು ವರ್ಷದಿಂದ ವರ್ಷಕ್ಕೆ ಇಳಿಯುತ್ತಿದ್ದು, ಒಂದೇ ವರ್ಷದಲ್ಲಿ ₹9,225 ಕೋಟಿ ಕಡಿಮೆಯಾಗಿದೆ ಎಂದು ಪ್ರಜಾವಾಣಿಯಲ್ಲಿ ವರದಿ ಪ್ರಕಟವಾಗಿತ್ತು.

ವರದಿಯನ್ನುಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನ್ಯಾಯಯುತವಾಗಿ ಕೊಡಬೇಕಾದ ತೆರಿಗೆ ಸುಂಕದಲ್ಲಿ ಪ್ರತಿವರ್ಷದಂತೆ ಈ ವರ್ಷವೂ 9,225 ಕೋಟಿ ಖೋತಾ ಆಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದೆ.

'ಡಬಲ್ ಇಂಜಿನ್ ಸರ್ಕಾರಗಳು, 25 ಬಿಜೆಪಿ ಸಂಸದರು ಈ ಬಗ್ಗೆ ದಿವ್ಯ ಮೌನ ವಹಿಸಿದ್ದೇಕೆ?' ಎಂದು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳನ್ನು ಪ್ರಶ್ನಿಸಿದೆ.

ಮುಂದುವರಿದು, ಆಡಳಿತ ವೈಫ್ಯವನ್ನು ಮುಚ್ಚಿಕೊಳ್ಳಲು ಬಿಜೆಪಿಯು ಧರ್ಮ ಕಲಹ ಸೃಷ್ಟಿಸುವ ಹುನ್ನಾರ ನಡೆಸುತ್ತಿದೆ ಎಂದೂ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT