ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರು ಇನ್ನೂ ಅಸ್ಪೃಶ್ಯರೇ ಎಂದು ತೋರಿಸುವುದು ಬಿಜೆಪಿ ಉದ್ದೇಶ: ಕಾಂಗ್ರೆಸ್ ಟೀಕೆ

Last Updated 14 ಅಕ್ಟೋಬರ್ 2022, 9:28 IST
ಅಕ್ಷರ ಗಾತ್ರ

ಬೆಂಗಳೂರು: ದಲಿತರ ಮನೆಗೆ ತೆರಳಿ ಉಪಾಹಾರ ಸೇವಿಸಿದ್ದಬಿಜೆಪಿ ನಾಯಕರನ್ನು ಟೀಕಿಸಿ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

'ಬಿಜೆಪಿಯವರ 'ದಲಿತರ ಮನೆ ಊಟ' ಎಂಬ ಕಾರ್ಯಕ್ರಮ ದಲಿತರು ಇನ್ನೂ ಅಸ್ಪೃಶ್ಯರು ಎಂದು ತೋರಿಸುವುದೇ ಆಗಿದೆ. ದಲಿತರ ಮನೆಗೆ ಹೋದ ಬಿಜೆಪಿ ನಾಯಕರು ಅಸ್ಪೃಶ್ಯತೆ ಆಚರಿಸಿ ಬಂದಿದ್ದಾರೆ. ದಲಿತರ ಮನೆಯ ಊಟ ಅಷ್ಟೇ ಅಲ್ಲ, ಅವರ ಮನೆಯ ತಟ್ಟೆ, ಲೋಟಗಳನ್ನೂ ಬಿಜೆಪಿ ಅಶುದ್ಧ, ಮೈಲಿಗೆ ಎಂದು ಭಾವಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ' ಎಂದು ಕಿಡಿಕಾರಿದೆ.

ಹೊಸಪೇಟೆ ತಾಲ್ಲೂಕಿನ ಕಮಲಾಪುರದ ಡಾ.ಬಿ.ಆರ್‌. ಅಂಬೇಡ್ಕರ್‌ ಕಾಲೊನಿಯ ಪರಿಶಿಷ್ಟ ಜಾತಿಯ ಹಿರಾಳ್‌ ಕೊಲ್ಲಾರಪ್ಪ ಅವರ ಮನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಬುಧವಾರ ಉಪಾಹಾರ ಸೇವಿಸಿದ್ದರು.

ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಆನಂದ್ ಸಿಂಗ್, ಶಾಸಕ ರಾಜುಗೌಡ, ಸಂಸದ ವೈ.ದೇವೇಂದ್ರಪ್ಪ ಸಹ ಇದ್ದರು.

ಸಿಎಂ ಬರುವ ಮುನ್ನ ಕೊಲ್ಲಾರಪ್ಪ ಅವರ ಮನೆಗೆ ಹೊರಗಿನಿಂದಲೂ ಉಪಾಹಾರ ತರಿಸಲಾಗಿತ್ತು. ಆದರೆ, ಕೊಲ್ಲಾರಪ್ಪ ಅವರ ಮಕ್ಕಳಾದ ರೇಣುಕಾ, ಹುಲಿಗೆಮ್ಮ ಹಾಗೂ ಅಂಬಮ್ಮ ಅವರು ಸಿದ್ಧಪಡಿಸಿದ್ದ ಉಪಾಹಾರವನ್ನೇ ಸಿಎಂ ಹಾಗೂ ಇತರರು ಸವಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT