ಸೋಮವಾರ, ಮಾರ್ಚ್ 20, 2023
30 °C

Covid-19 Karnataka Update: ಹೊಸ ಪ್ರಕರಣ ಮತ್ತೆ ಏರಿಕೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH Photo

ಬೆಂಗಳೂರು: ರಾಜ್ಯದಲ್ಲಿ ಒಂದೂವರೆ ಸಾವಿರದ ಆಸುಪಾಸಿಗೆ ಇಳಿಕೆ ಕಂಡಿದ್ದ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಮಂಗಳವಾರ 3,104ಕ್ಕೆ ಏರಿಕೆ ಕಂಡಿದೆ.

ಭಾನುವಾರ ಹೊಸ ಪ್ರಕರಣಗಳು 1,564ಕ್ಕೆ ಇಳಿದಿತ್ತು. ಸಂಖ್ಯೆ ಎರಡು ದಿನಗಳಿಂದ ಏರುಗತಿ ಪಡೆದಿದೆ. ಒಂದು ದಿನದಲ್ಲಿ 1.16 ಲಕ್ಷ ಮಾದರಿಗಳ ಪರೀಕ್ಷೆ ಮಾಡಲಾಗಿದ್ದು, ಸೋಂಕು ದೃಢಪ್ರಮಾಣ ಶೇ 2.65ರಷ್ಟಿದೆ.

ಬೆಂಗಳೂರಿನಲ್ಲಿ 715 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಹೊಸ ‍ಪ್ರಕರಣಗಳು 500ರ ಗಡಿಯೊಳಗಿವೆ. 12 ಜಿಲ್ಲೆಗಳಲ್ಲಿ ಈ ಸಂಖ್ಯೆ ಎರಡಂಕಿ ಹಾಗೂ 6 ಜಿಲ್ಲೆಗಳಲ್ಲಿ ಒಂದಂಕಿಯಲ್ಲಿದೆ. ಈವರೆಗೆ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 28.59 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 40 ಸಾವಿರಕ್ಕೆ ಇಳಿಕೆಯಾಗಿದೆ.

 

 

ಇದನ್ನೂ ಓದಿ: ಪ್ರಜಾವಾಣಿ - ಡೆಕ್ಕನ್ ಹೆರಾಲ್ಡ್ ಕೋವಿಡ್-19 ಪರಿಹಾರ ನಿಧಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು