ಭಾನುವಾರ, ಸೆಪ್ಟೆಂಬರ್ 27, 2020
27 °C
ಆರೋಗ್ಯ ಇಲಾಖೆ ಕಾರ್ಯವೈಖರಿಗೆ ಆಕ್ರೋಶ: ಜನರಲ್ಲಿ ಮನೆ ಮಾಡಿದ ಆತಂಕ

ಕೊರೊನಾ ಸೋಂಕಿತರನ್ನು ಸಾಗಿಸುವ ಆಂಬ್ಯುಲೆನ್ಸ್‌ ಅನ್ನು ಕಾಲುವೆಯಲ್ಲೇ ತೊಳೆದರು...

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ರೋಗಿಗಳನ್ನು ಸಾಗಿಸುವ ಆಂಬುಲೆನ್ಸ್‌ಗಳನ್ನು ನಗರದ ಹೊರವಲಯದ ಅಲ್ಲೀಪುರ ಸಮೀಪದ ಕಾಲುವೆಯ ಸಮೀಪದಲ್ಲೇ ನಿಲ್ಲಿಸಿ ಅಲ್ಲಿನ ನೀರಿನಿಂದ ತೊಳೆಯುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಕಾಲುವೆಯ ಇಳಿಜಾರಿನಲ್ಲೇ ಆಂಬುಲೆನ್ಸ್‌ಗಳನ್ನು ನಿಲ್ಲಿಸುವುದರಿಂದ, ತೊಳೆದ ನೀರು ಮತ್ತೆ ಕಾಲುವೆಯನ್ನೇ ಸೇರುತ್ತಿದೆ. ಈ ವಾಹನಗಳಲ್ಲಿ ಕೊರೊನಾ ಸೋಂಕಿತರನ್ನು, ಸೋಂಕಿ ತರ ಮೃತದೇಹಗಳನ್ನು ಸಾಗಿಸಿದ್ದರೆ ಹೆಚ್ಚಿನ ಅಪಾಯವೂ ಉಂಟಾಗುವ ಸಾಧ್ಯತೆ ಇದೆ ಎಂಬುದು ಜನರ ಅಳಲು.

ಶನಿವಾರ ಸ್ಥಳಕ್ಕೆ ‘ಪ್ರಜಾವಾಣಿ’ ಭೇಟಿ ನೀಡಿದ ಸಂದರ್ಭದಲ್ಲಿ ಎರಡು ವಾಹನಗಳು ಕಂಡು ಬಂದವು. ಒಂದು ವಾಹನವು ಕಾಲುವೆಯ ಇಳಿಜಾರಿನಲ್ಲಿ ನಿಂತಿದ್ದರೆ ಮತ್ತೊಂದು ವಾಹನವನ್ನು ಕಾಲುವೆಯ ಮೇಲ್ಭಾಗದ ರಸ್ತೆಯಲ್ಲಿ ನಿಲ್ಲಿಸಿ ಸಿಬ್ಬಂದಿಯೊಬ್ಬರು ತೊಳೆಯುತ್ತಿದ್ದರು.

ಆತಂಕ ಪರಿಹರಿಸಿ: ವಾಹನಗಳನ್ನು ಕಾಲುವೆ ಬಳಿಯೇ ನಿಲ್ಲಿಸಿ ತೊಳೆಯುತ್ತಿರುವ ಕುರಿತು ಮಾಹಿತಿ ನೀಡಿದ ಸ್ಥಳೀಯ ನಿವಾಸಿ ಸ್ವಾಮಿ, ’ಕೊರೊನಾ ಆತಂಕ ಹಬ್ಬಿರುವ ಇಂಥ ಸಂದರ್ಭದಲ್ಲಿ ಕಾಲುವೆ ಬಳಿ ಇಂಥ ವಾಹನಗಳನ್ನು ತರುವುದೇ ಆತಂಕಕಾರಿ. ಅದನ್ನೂ ದಾಟಿ ವಾಹನಗಳನ್ನು ಅಲ್ಲಿಯೇ ತೊಳೆಯು ವುದು ನಮ್ಮಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ’ ಎಂದು ಹೇಳಿದರು. ’ಕಾಲುವೆ ನೀರನ್ನೇ ಪಾಲಿಕೆ ಸೇರಿದಂತೆ ವಿವಿಧ ಸ್ಥಳೀಯ ಆಡಳಿತ ಸಂಸ್ಥೆಗಳು ಶುದ್ಧೀಕರಿಸಿ ಕುಡಿಯುವ ಉದ್ದೇಶಕ್ಕೂ ಪೂರೈಸುತ್ತವೆ. ಸೋಂಕಿನ ಅಂಶಗಳು ಸೇರ್ಪಡೆಗೊಂಡಿದ್ದರೆ ಜನ, ಜಾನುವಾರು ಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಆಂಬುಲೆನ್ಸ್‌ಗಳನ್ನು ಜನರಿಂದ ದೂರವಿರುವ ಪ್ರತ್ಯೇಕ ಪ್ರದೇಶಗಳಲ್ಲಿ ತೊಳೆಯುವ ವ್ಯವಸ್ಥೆಯನ್ನು ಕಲ್ಪಿಸಬೇಕು’ ಎಂದು ರಾಮು ಹೇಳಿದರು.

‘ಆಂಬುಲೆನ್ಸ್‌ಗಳ ಸ್ವಚ್ಛತೆಗಾಗಿ ಆರೋಗ್ಯ ಇಲಾಖೆಯು ಸ್ಥಳ ಮತ್ತು ನೀರಿನ ಕೊರತೆಯನ್ನು ಎದುರಿಸುತ್ತಿ ದೆಯೇ? ಹಾಗಾದರೆ ಆಂಬುಲೆನ್ಸ್‌ಗಳ ಸ್ಯಾನಿಟೈಸೇಶನ್‌ ಪ್ರಕ್ರಿಯೆ ನಡೆಯು ತ್ತಿಲ್ಲವೇ’ ಎಂದು ಪ್ರಶ್ನಿಸಿದರು. 

‘ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌, ‘ಈ ಬಗ್ಗೆ ಮಾಹಿತಿ ಇಲ್ಲ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು  ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು