ಸೋಮವಾರ, ಜುಲೈ 26, 2021
22 °C

Covid-19 Karnataka Update: 24 ಗಂಟೆಗಳಲ್ಲಿ 7,345 ಹೊಸ ಪ್ರಕರಣ, 148 ಜನ ಸಾವು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 7,345 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ಪತ್ತೆಯಾಗಿದ್ದು, 148 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 27,84,355ಕ್ಕೆ ಏರಿಕೆಯಾಗಿದೆ. ಒಟ್ಟಾರೆ 33,296 ಜನರು ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಈವರೆಗೆ 25,99,472 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 1,51,566 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ಇಂದಿನ ಖಚಿತ ಪ್ರಕರಣಗಳ ಪ್ರಮಾಣ 4.35ರಷ್ಟಿದ್ದು, ಮೃತಪಟ್ಟವರ ಪ್ರಮಾಣ ಶೇ 2.01ರಷ್ಟಿದೆ. 17,913 ಜನರು ಗುಣಮುಖರಾಗಿ ಇಂದು ಬಿಡುಗಡೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಇಂದು ಹೊಸದಾಗಿ 1,611 ಜನರಿಗೆ ಸೋಂಕು ತಗುಲಿದ್ದು, ಒಟ್ಟಾರೆ 11,06,138  ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆ 12,00,754ಕ್ಕೆ ಏರಿಕೆಯಾಗಿದೆ.

ಬಾಗಲಕೋಟೆಯಲ್ಲಿ 47, ಬಳ್ಳಾರಿ 183, ಬೆಳಗಾವಿ 254, ಬೆಂಗಳೂರು ಗ್ರಾಮಾಂತರ 275, ಬೀದರ್ 14, ಚಾಮರಾಜನಗರ 97, ಚಿಕ್ಕಬಳ್ಳಾಪುರ 145, ಚಿಕ್ಕಮಗಳೂರು 254, ಚಿತ್ರದುರ್ಗ 95, ದಕ್ಷಿಣ ಕನ್ನಡ 790, ದಾವಣಗೆರೆ 207, ಧಾರವಾಡ 112, ಗದಗ 52, ಹಾಸನ 531, ಹಾವೇರಿ 27, ಕಲಬುರಗಿ 26, ಕೊಡಗು 116, ಕೋಲಾರ 102, ಕೊಪ್ಪಳ 77, ಮಂಡ್ಯ 317, ಮೈಸೂರು 841, ರಾಯಚೂರು 22, ರಾಮನಗರ 58, ಶಿವಮೊಗ್ಗ 262, ತುಮಕೂರು 347, ಉಡುಪಿ 159, ಉತ್ತರ ಕನ್ನಡ 239, ವಿಜಯಪುರ 73 ಮತ್ತು ಯಾದಗಿರಿಯಲ್ಲಿ 12 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಹೊಸ ಪ್ರಕರಣಗಳು ಪತ್ತೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು