ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾವೈರಸ್ ಹೊಸ ಸ್ವರೂಪ ಪತ್ತೆ: ಭಾರತ–ಬ್ರಿಟನ್‌ ವಿಮಾನ ಸಂಚಾರ 31ರವರೆಗೆ ರದ್ದು

Last Updated 21 ಡಿಸೆಂಬರ್ 2020, 19:36 IST
ಅಕ್ಷರ ಗಾತ್ರ

ನವದೆಹಲಿ: ಬ್ರಿಟನ್‌ಗೆ ಹೋಗುವ ಮತ್ತು ಬರುವ ಎಲ್ಲ ವಿಮಾನಗಳ ಸಂಚಾರವನ್ನು ಬುಧವಾರದಿಂದ ಇದೇ 31ರವರೆಗೆ ಭಾರತವು ರದ್ದುಪಡಿಸಿದೆ. ಕೊರೊನಾ ವೈರಾಣುವಿನ ಹೊಸ ಸ್ವರೂಪವು ಅಲ್ಲಿ ಪತ್ತೆಯಾದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಸೋಮವಾರ ತಿಳಿಸಿದೆ.

ಮಂಗಳವಾರದವರೆಗೆ ಬ್ರಿಟನ್‌ನಿಂದ ಬರುವ ಪ್ರಯಾಣಿಕರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುವುದು.ಸೋಂಕು ಪತ್ತೆಯಾದ ವ್ಯಕ್ತಿಗಳನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಕಳುಹಿಸಲಾಗುವುದು. ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗದ ವ್ಯಕ್ತಿಗಳು ಕೂಡ ಏಳು ದಿನ ಮನೆಯಲ್ಲಿ ಪ್ರತ್ಯೇಕವಾಗಿ ಇರುವಂತೆ ಸೂಚಿಸಲಾಗುವುದು. ಅವರ ಮೇಲೆ ವೈದ್ಯಕೀಯ ನಿಗಾ ಇರಿಸಲಾಗುವುದು.

ಈವರೆಗೆ, ಪ್ರಯಾಣಕ್ಕೆ 72 ತಾಸು ಮುಂಚೆ ಕೋವಿಡ್‌ ತಪಾಸಣೆಗೆ ಒಳಗಾಗಿ ‘ಸೋಂಕು ಇಲ್ಲ’ ಎಂಬ ಪ್ರಮಾಣಪತ್ರ ನೀಡಿದವರನ್ನು ಭಾರತದ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಮತ್ತೆ ಪರೀಕ್ಷೆಗೆ ಒಳಪಡಿಸುತ್ತಿರಲಿಲ್ಲ.

ಕೆನಡಾ, ಟರ್ಕಿ, ಬೆಲ್ಜಿಯಂ, ಇಟಲಿ, ಇಸ್ರೇಲ್‌ ಸೇರಿ ಹಲವು ದೇಶಗಳು ಬ್ರಿಟನ್‌ಗೆ ವಿಮಾನ ಹಾರಾಟವನ್ನು ರದ್ದುಪಡಿಸಿವೆ.ಹೊಸ ಸ್ವರೂಪದ ವೈರಾಣು ಹರಡುವಿಕೆಯು ನಿಯಂತ್ರಣ ಮೀರಿದೆ ಎಂದು ಬ್ರಿಟನ್‌ ಹೇಳಿದೆ. ಅಲ್ಲಿನ ಕೆಲವು ಭಾಗಗಳಲ್ಲಿ ಭಾನುವಾರದಿಂದಲೇ ಕಟ್ಟುನಿಟ್ಟಿನ ಲಾಕ್‌ಡೌನ್‌ ಹೇರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT