ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಪ್ರಕರಣಗಳ ಸಂಖ್ಯೆ 12 ಸಾವಿರಕ್ಕೆ ಏರಿಕೆ

Last Updated 9 ಜನವರಿ 2022, 19:12 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಭಾನುವಾರ 12 ಸಾವಿರ ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಏಳೂವರೆ ತಿಂಗಳಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿವೆ.

ಒಂದು ದಿನದ ಅವಧಿಯಲ್ಲಿ 1.89 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ.ಸೋಂಕು ದೃಢ ಪ್ರಮಾಣ
ಶೇ 6.33ಕ್ಕೆ ಏರಿಕೆಯಾಗಿದೆ.ಈ ತಿಂಗಳು 9 ದಿನಗಳಲ್ಲಿ 44,621 ಮಂದಿಗೆಕೊರೊನಾ ಸೋಂಕು ದೃಢಪಟ್ಟಿದೆ. ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 30.51 ಲಕ್ಷ ದಾಟಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. 10 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಮೂರಂಕಿ, 16 ಜಿಲ್ಲೆಗಳಲ್ಲಿ ಎರಡಂಕಿಯಲ್ಲಿದೆ.ಬೆಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದ್ದು,9,020 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ರಾಜ್ಯದಲ್ಲಿ ವರದಿಯಾದ ಹೊಸ ಪ್ರಕರಣಗಳಲ್ಲಿ ಶೇ 75 ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿಯೇ ವರದಿಯಾಗಿದ್ದು,ಕೋವಿಡ್ ದೃಢ ಪ್ರಮಾಣ ಶೇ 10 ರಷ್ಟಿದೆ.

ಮೈಸೂರಿನಲ್ಲಿ 398, ಉಡುಪಿಯಲ್ಲಿ 340, ದಕ್ಷಿಣ ಕನ್ನಡದಲ್ಲಿ 298, ಮಂಡ್ಯದಲ್ಲಿ 261, ಶಿವಮೊಗ್ಗದಲ್ಲಿ 198, ತುಮಕೂರಿನಲ್ಲಿ 190, ಹಾಸನದಲ್ಲಿ 182, ಧಾರವಾಡದಲ್ಲಿ 147, ಬಳ್ಳಾರಿಯಲ್ಲಿ 107 ಹಾಗೂ ಬೆಳಗಾವಿ
ಯಲ್ಲಿ 105 ಪ್ರಕರಣಗಳು ವರದಿಯಾಗಿವೆ.ಉಳಿದಜಿಲ್ಲೆಗಳಲ್ಲಿಹೊಸ ಪ್ರಕರಣಗಳು 100ಕ್ಕಿಂತ ಕಡಿಮೆ ಇವೆ.

ಸೋಂಕಿತರಲ್ಲಿ 901 ಮಂದಿ ಚೇತರಿಸಿಕೊಂಡಿದ್ದಾರೆ. ಗುಣಮುಖರಾದವರ ಒಟ್ಟು ಸಂಖ್ಯೆ 29.63 ಲಕ್ಷ ದಾಟಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದ್ದು, 49,602ಕ್ಕೆ ಏರಿಕೆಯಾಗಿದೆ.ಬೆಂಗಳೂರಿನಲ್ಲಿ 40,570 ಸಕ್ರಿಯ ಪ್ರಕರಣಗಳಿವೆ. ದಕ್ಷಿಣ ಕನ್ನಡ (1,267) ಹಾಗೂ ಮೈಸೂರಿನಲ್ಲಿ (1,052) ಸಾವಿರಕ್ಕೂ ಅಧಿಕಸಕ್ರಿಯ ಪ್ರಕರಣಗಳಿವೆ.

ಕೋವಿಡ್ಪೀಡಿತರಲ್ಲಿ ಬೆಂಗಳೂರಿನಲ್ಲಿ ಇಬ್ಬರು, ಬಳ್ಳಾರಿ ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.ರಾಜ್ಯದಲ್ಲಿ ಮರಣ ಪ್ರಮಾಣ ದರವು ಶೇ 0.03 ರಷ್ಟು ವರದಿಯಾಗಿದೆ. ಈವರೆಗೆಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 38,370ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT