ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಪೊಲೀಸರಿಗೆ ಖಾಕಿ ಮಾಸ್ಕ್

Last Updated 1 ಮೇ 2021, 21:28 IST
ಅಕ್ಷರ ಗಾತ್ರ

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರು, ಕರ್ತವ್ಯಕ್ಕೆ ತೆರಳುವ ಪೊಲೀಸರನ್ನು ಸಾಂಕ್ರಾಮಿಕಕಾಯಿಲೆಯಿಂದ ರಕ್ಷಿಸಲು ಮಾಸ್ಕ್ ಸಿದ್ಧಪಡಿಸಿದ್ದಾರೆ. ಸಮವಸ್ತ್ರಕ್ಕೆ ಹೊಂದಿಕೆಯಾಗುವ ಖಾಕಿ ಬಟ್ಟೆಯಿಂದ ತಯಾರಿಸಿದ ಈ ಮಾಸ್ಕ್ ಅನ್ನು ಉಚಿತವಾಗಿ ಪೊಲೀಸರಿಗೆ ನೀಡುತ್ತಿದ್ದಾರೆ.

ಪೊಲೀಸ್ ಲೇನ್ ಪಾಂಡೇಶ್ವರದ ಜ್ಞಾನೋದಯ ಮಹಿಳಾ ಮಂಡಳಿಯ ಅಧ್ಯಕ್ಷೆ ಭಾಗೀರಥಿ ಹಾಗೂ ಏಳು ಸದಸ್ಯೆಯರು, ಒಂದು ವಾರದಲ್ಲಿ 2,500 ಮಾಸ್ಕ್ ತಯಾರಿಸಿದ್ದಾರೆ. ಗೃಹಿಣಿಯರಾಗಿರುವ ಇವರು ಬಿಡುವಿನ ವೇಳೆಯಲ್ಲಿ ಹೊಲಿಗೆ, ಕಸೂತಿ ಮಾಡುತ್ತಿದ್ದರು. ಈಗ ಕೋವಿಡ್ ಹೆಚ್ಚುತ್ತಿರುವ ಕಾರಣಕ್ಕೆ ಕೊರೊನಾ ವಾರಿಯರ್ಸ್‌ಗಳ ಸುರಕ್ಷತೆ ಬಗ್ಗೆ ಕಾಳಜಿ ತೋರಿದ್ದಾರೆ.

ಇದನ್ನು ಗಮನಿಸಿದ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು, ಖಾಕಿ ಬಟ್ಟೆ, ಅಗತ್ಯ ಸಾಮಗ್ರಿಗಳನ್ನು ಪೂರೈಸುವುದಾಗಿ ಭರವಸೆ ನೀಡಿದ್ದು, 10 ಸಾವಿರ ಮಾಸ್ಕ್ ಸಿದ್ಧಪಡಿಸಿಕೊಡುವಂತೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT