ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ವ್ಯಕ್ತಿಯ ಶವಸಂಸ್ಕಾರಕ್ಕೆ ಸಾಥ್: ಮುಸ್ಲಿಂ ಯುವಕರಿಂದ ಮಾದರಿ ಕಾರ್ಯ

Last Updated 26 ಏಪ್ರಿಲ್ 2021, 21:22 IST
ಅಕ್ಷರ ಗಾತ್ರ

ಕೊಪ್ಪಳ: ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಮುಸ್ಲಿಂ ಯುವಕರು ಭಾನುವಾರ ರಾತ್ರಿ ನಗರದಲ್ಲಿ ನಡೆಸಿದರು.

ವಿಕಾಸನಗರದ85 ವರ್ಷದ ವೃದ್ಧರೊಬ್ಬರು ಕೋವಿಡ್‌ನಿಂದ ಸಾವನ್ನಪ್ಪಿದ್ದರು. ಅವರಪುತ್ರ ಗಿಣಗೇರಿಯ ಅಲ್ಟ್ರಾಟೆಕ್ಸಿಮೆಂಟ್‌ ಕಾರ್ಖಾನೆ ನೌಕರ. ಅವರಿಗೂ ಕೋವಿಡ್‌ ದೃಢಪಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಮೃತರ ಅಂತ್ಯಕ್ರಿಯೆ ನೆರವೇರಿಸಲು ಯಾರೂ ಮುಂದೆ ಬರಲಿಲ್ಲ. ಹೀಗಾಗಿಕೊಪ್ಪಳದ ಜಮಾತೇ ಇಸ್ಲಾಂ ಸಂಘಟನೆಯ ಹ್ಯೂಮಾನಿಟೇರಿಯನ್ರಿಲೀಫ್‌ ಸೊಸೈಟಿಯ ಕಾರ್ಯಕರ್ತರುದಾವಣಗೆರೆಯಿಂದ ಬಂದಿದ್ದ ಅವರ ಸಂಬಂಧಿ ಸಮ್ಮುಖದಲ್ಲಿಹಿಂದೂ ಪದ್ಧತಿಯಂತೆ ಗವಿಮಠದ ಹಿಂಭಾಗದ ಸ್ಮಶಾನದಲ್ಲಿ ಅಂತಿಮಸಂಸ್ಕಾರ ನಡೆಸಿದರು.

ಅಂತ್ಯ ಸಂಸ್ಕಾರದಲ್ಲಿ ಸಂಘಟನೆಯ ಜಮಾತ್‌ನ ಅಧ್ಯಕ್ಷ ಸಯ್ಯದ್ ಹಿದಾಯತ್ ಅಲಿ, ಗ್ರೂಪ್ ಲೀಡರ್ ಮಹಮ್ಮದ್ ಖಲೀಲ್, ಅಸ್ಗರ್‌ ಖಾನ್, ಗೌಸ್ ಪಟೇಲ್, ಸಜೀದ್ ಹುಸೇನ್, ರಹಮತ್ ಹುಸೈನ್, ಮಹಮ್ಮದ್ ಅಖೀಲ್ ಭಾಗವಹಿಸಿದ್ದರು.

ಹೆಚ್ಚಿನ ಹಣಕ್ಕೆ ಚಾಲಕನ ಒತ್ತಾಯ: ಖಾಸಗಿ ಅಂಬುಲೆನ್ಸ್ ಚಾಲಕ ಆಸ್ಪತ್ರೆಿಂದ ಸ್ಮಶಾನಕ್ಕೆ ಕೇವಲ 6 ಕಿ.ಮೀ ದೂರಕ್ಕೆ 12 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾನೆ. ಬಳಿಕ ₹ 4 ಸಾವಿರ ಕೊಡುವುದಾಗಿ ಹೇಳಿದ ನಂತರ ಶವ ಸಾಗಿಸಲು ಒಪ್ಪಿಕೊಂಡಿದ್ದಾನೆ.

ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌, ‘ಅಂತ್ಯಕ್ರಿಯೆಯಾದ ಬಳಿಕ ಇದು ತಮ್ಮ ಗಮನಕ್ಕೆ ಬಂದಿದೆ. ಚಾಲಕರು ಮಾನವೀಯತೆಯಿಂದ ವರ್ತಿಸಬೇಕು’ ಎಂದರು.

ವಧುವಿಗೆ ಕೋವಿಡ್‌, ಆತಂಕ: ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮದ ಮದುಮಗಳೊಬ್ಬಳಿಗೆಕೋವಿಡ್‌ ದೃಢಪಟ್ಟಿದೆ.ಮದುವೆಯಾಗಿ ವಧು ಮನೆ ಸೇರಿದ ನಂತರ ವರದಿ ಬಂದಿದೆ. ಇದರಿಂದಾಗಿ ಮದುವೆಗೆ ಹೋಗಿದ್ದವರಿಗೂ ಆತಂಕ ಶುರುವಾಗಿದೆ. ವಧುವಿನ ತಾಯಿ ಮತ್ತು ಸಹೋದರಿಗೆ ಸೋಂಕು ತಗುಲಿದ್ದು, ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ.

ಮುಸ್ಲಿಂ ಯುವಕರಿಂದ ಅಂತ್ಯಸಂಸ್ಕಾರ
ಬಸವಕಲ್ಯಾಣ (ಬೀದರ್‌ ಜಿಲ್ಲೆ): ಇಲ್ಲಿನ ಶಹಾನಗರ ನಿವಾಸಿ ಯಾದವರಾವ್ (55) ಅವರ ಅಂತ್ಯಕ್ರಿಯೆಯನ್ನು ಭಾನುವಾರ ಅದೇ ಓಣಿಯ ಮುಸ್ಲಿಂ ಯುವಕರು ನೆರವೇರಿಸಿದ್ದಾರೆ. ಯಾದವರಾವ್ ಮನೆಯಲ್ಲಿ ಮಲಗಿದ್ದಲ್ಲೇ ಪ್ರಾಣಬಿಟ್ಟಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಕೋವಿಡ್ ಭಯದಿಂದ ಅಂತ್ಯಸಂಸ್ಕಾರಕ್ಕೆ ಓಣಿ ಜನರು ಬಾರದಿದ್ದಾಗ ಮುಸ್ಲಿಂ ಯುವಕರು ಶವವನ್ನು ವಾಹನದಲ್ಲಿ ಸಾಗಿಸಿ ಖಾನಾಪುರ ರಸ್ತೆಯಲ್ಲಿನ ಹಿಂದೂ ಸಮುದಾಯದ ಸ್ಮಶಾನದಲ್ಲಿ ಶವಸಂಸ್ಕಾರ ನಡೆಸಿದರು.

ಅಂತ್ಯಕ್ರಿಯೆಗೆ ಬಾರದ ಸಂಬಂಧಿಕರು
ಬ್ಯಾಡಗಿ (ಹಾವೇರಿ ಜಿಲ್ಲೆ): ಕೋವಿಡ್‌ ಸೋಂಕು ತಗುಲಿರುವ ಶಂಖೆ ಇದ್ದ ವ್ಯಕ್ತಿಯ ಶವಸಂಸ್ಕಾರವನ್ನು ತಾಲ್ಲೂಕಿನ ಖುರ್ದ ವೀರಾಪುರ ಗ್ರಾಮದಲ್ಲಿ ಪಟ್ಟಣದ ಮುಸ್ಲಿಂ ಸಮಾಜದ ಸ್ವಯಂ ಸೇವಕರು ಸೋಮವಾರ ನಡೆಸಿದ್ದಾರೆ.

ತುಮಕೂರು ಜಿಲ್ಲೆಯ ಪಾವಗಡದ ವ್ಯಕ್ತಿಯೊಬ್ಬರು ರಾಣೆಬೆನ್ನೂರ ಖಾಸಗಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದರು. ಚಿಕಿತ್ಸೆವೇಳೆ ಮೃತಪಟ್ಟಿದ್ದು, ಅವರ ಕೋವಿಡ್‌ ವರದಿ ಬಂದಿರಲಿಲ್ಲ. ಮೃತರ ಸಂಬಂಧಿಗಳು ಕೂಡ ಶವ ಸಂಸ್ಕಾರಕ್ಕೆ ಮುಂದಾಗಲಿಲ್ಲ. ಸ್ವಯಂ ಸೇವಕರಾದ ಮಂಜೂರಲಿ ಹಕೀಂ, ಮುಕ್ತಿಯಾರ್‌ ಮುಲ್ಲಾ, ಅಜೀಜ್ ಬಿಜಾಪುರ, ಹಸನಲಿ ಕುಪ್ಪೇಲೂರು ಕೋವಿಡ್ ನಿಯಮಾವಳಿ ಪ್ರಕಾರ ಶವ ಸಂಸ್ಕಾರ ನಡೆಸಿದರು ಎಂದು ಹಿರಿಯ ಆರೋಗ್ಯ ಸಹಾಯಕ ಎಂ.ಎನ್‌.ಕಂಬಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT