ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್: ರಾಜ್ಯದಲ್ಲಿ ಉಪತಳಿಗಳು ಪತ್ತೆ

Last Updated 22 ಜೂನ್ 2022, 16:06 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಾಣುವಿನ ರೂಪಾಂತರಿ ಓಮೈಕ್ರಾನ್‌ನ ಉಪತಳಿಗಳಾದ ಬಿಎ 3, ಬಿಎ 4 ಹಾಗೂ ಬಿಎ 5ರಾಜ್ಯದಲ್ಲಿ ಪತ್ತೆಯಾಗಿವೆ.

ಸೋಂಕು ದೃಢಪಟ್ಟವರ ಮಾದರಿಗಳನ್ನು ವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆಗೆ (ಜಿನೋಮಿಕ್ ಸಿಕ್ವೆನ್ಸೀಸ್‌) ಒಳಪಡಿಸಿದಾಗ ಉಪತಳಿಗಳು ದೃಢಪಟ್ಟಿವೆ. 2022ರ ಮೇಮತ್ತು ಜೂನ್ ತಿಂಗಳಲ್ಲಿ ನಡೆಸಲಾದಜಿನೋಮಿಕ್ ಸಿಕ್ವೆನ್ಸೀಸ್‌ ಪರೀಕ್ಷೆಯಲ್ಲಿಶೇ 98 ರಷ್ಟು ಮಂದಿಯಲ್ಲಿ ಓಮೈಕ್ರಾನ್‌ನ ಬಿಎ1.1.529, ಬಿಎ1 ಮತ್ತು ಬಿಎ2 ಉಪತಳಿಗಳು ಪತ್ತೆಯಾಗಿವೆ. ಶೇ 2 ರಷ್ಟುಹೊಸ ಉಪತಳಿಗಳು ದೃಢಪಟ್ಟಿವೆ.

ರಾಜ್ಯದಲ್ಲಿ ಕಾಣಿಸಿಕೊಂಡ ಕೋವಿಡ್ ಮೂರನೇ ಅಲೆಗೆ ಓಮೈಕ್ರಾನ್‌ನ ಉಪತಳಿಗಳಾದಬಿಎ1.1.529, ಬಿಎ1 ಮತ್ತು ಬಿಎ2 ಕಾರಣವಾಗಿದ್ದವು.

ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವ ಕೊರೊನಾ ವೈರಾಣುವಿನ ಆಲ್ಫಾ 156, ಬೀಟಾ 8, ಡೆಲ್ಟಾ ಮತ್ತು ಉಪತಳಿಗಳು 4,625, ಇಟಾ, ಕಪ್ಪಾ ಮತ್ತು ಪಾಂಗೊ 345ಹಾಗೂ ಓಮೈಕ್ರಾನ್‌ನ 7,620 ಪ್ರಕರಣಗಳು ರಾಜ್ಯದಲ್ಲಿ ಈವರೆಗೆ ದೃಢಪಟ್ಟಿವೆ.

1,194 ಪ್ರಕರಣಗಳಲ್ಲಿ ಓಮೈಕ್ರಾನ್‌ನ ಉಪತಳಿಯಾದಬಿಎ1.1.529ಖಚಿತಪಟ್ಟಿದೆ. ಬಿಎ1 ಉಪತಳಿ 101, ಬಿಎ2 ಉಪತಳಿ 6,281, ಬಿಎ3 ಉಪತಳಿ 2, ಬಿಎ4 ಉಪತಳಿ 4 ಹಾಗೂ ಬಿಎ5 ಉಪತಳಿ 38 ಪ್ರಕರಣಗಳಲ್ಲಿ ದೃಢಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT