ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ: 9 ಜಿಲ್ಲೆಗಳಲ್ಲಿ ಶೇ 100 ಸಾಧನೆ

Last Updated 5 ಜನವರಿ 2022, 2:23 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಲಸಿಕೆಯ ಮೊದಲ ಡೋಸ್ ವಿತರಣೆಯಲ್ಲಿ ಶೇ 100 ರಷ್ಟು ಸಾಧನೆ ಮಾಡಿದ ರಾಜ್ಯದ ಜಿಲ್ಲೆಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ರಾಜ್ಯದ ಒಟ್ಟಾರೆ ಸಾಧನೆ ಶೇ 97 ರಷ್ಟಿದೆ.

ರಾಜ್ಯದಲ್ಲಿ 2021ರ ಜ.16ರಿಂದಲಸಿಕೆವಿತರಿಸಲಾಗುತ್ತಿದೆ. ಆರೋಗ್ಯ ಇಲಾಖೆಯು 18 ವರ್ಷಗಳು ಮೇಲ್ಪಟ್ಟ 4.89 ಕೋಟಿ ಮಂದಿಗೆಲಸಿಕೆಹಾಕುವ ಗುರಿ ಹಾಕಿಕೊಂಡಿದೆ. ಅವರಲ್ಲಿ 4.76 ಕೋಟಿ ಮಂದಿಗೆ ಮೊದಲ ಡೋಸ್ಲಸಿಕೆನೀಡಲಾಗಿದೆ.

ಬೆಂಗಳೂರು ನಗರ (ಶೇ 129), ಗದಗ (ಶೇ 102), ವಿಜಯಪುರ (ಶೇ 102), ಬೀದರ್ (ಶೇ 101) ಹಾಗೂ ಬಾಗಲಕೋಟೆ (ಶೇ 100) ಜಿಲ್ಲೆ ಮೊದಲ ಡೋಸ್ ವಿತರಣೆಯಲ್ಲಿ ಮುಂಚೂಣಿಯಲ್ಲಿ ಇವೆ. ಧಾರವಾಡ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಕೊಡಗಿನಲ್ಲಿ ಶೇ 100 ರಷ್ಟು ಗುರಿ ತಲುಪಲಾಗಿದೆ. ದಾವಣಗೆರೆ, ಬೆಳಗಾವಿ ಹಾಗೂ ಹಾಸನದಲ್ಲಿ ಶೇ 99 ರಷ್ಟು ಮಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.

ಲಸಿಕೆಯ ಮೊದಲ ಡೋಸ್ ವಿತರಣೆಯಲ್ಲಿಬಿಬಿಎಂಪಿ (ಶೇ 92) ಕಡೆಯ ಸ್ಥಾನದಲ್ಲಿದೆ. ಬೆಂಗಳೂರು ಗ್ರಾಮಾಂತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯೂ (ಶೇ 95ಕ್ಕಿಂತ ಕಡಿಮೆ) ಹಿಂದೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT