ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಟ್ರಸ್ಟ್‌ಗಳಿಗೆ ಅಧ್ಯಕ್ಷರ ನೇಮಕ

ಮೃತ ರಾಜೇಶ್ವರಿ ತೇಜಸ್ವಿಗೂ ಸದಸ್ಯತ್ವ ಭಾಗ್ಯ! *ಗಳಗನಾಥ ಟ್ರಸ್ಟ್‌ಗೆ ಚಕ್ರವರ್ತಿ ಸೂಲಿಬೆಲೆ ಅಧ್ಯಕ್ಷ
Last Updated 24 ಆಗಸ್ಟ್ 2022, 15:36 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಟ್ರಸ್ಟ್‌, ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಕಳೆದ ವರ್ಷ ಮೃತಪಟ್ಟಿರುವ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರನ್ನು ಚಿಕ್ಕಮಗಳೂರಿನ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರನ್ನಾಗಿ ನೇಮಿಸಲಾಗಿದೆ.

ಹಾವೇರಿಯಗಳಗನಾಥ ಟ್ರಸ್ಟ್‌ಗೆ ಚಕ್ರವರ್ತಿ ಸೂಲಿಬೆಲೆ ಅವರು ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದ್ದ 24 ಟ್ರಸ್ಟ್‌, ಪ್ರತಿಷ್ಠಾನಗಳ ಕಾರ್ಯವೈಖರಿಯ ಬಗ್ಗೆ ‘ಪ್ರಜಾವಾಣಿ’ ಇದೇ 14 ರಂದು ‘ನಾಮಬಲವೇ ಆಸ್ತಿ: ಕಾಯಕ ನಾಸ್ತಿ’ ಶೀರ್ಷಿಕೆಯಡಿ ‘ಒಳನೋಟ’ ಪ್ರಕಟಿಸಿತ್ತು. ಈಗ ಸರ್ಕಾರವು 21ಟ್ರಸ್ಟ್‌, ಪ್ರತಿಷ್ಠಾನಗಳಿಗೆ ಹೊಸದಾಗಿ ಕಾರ್ಯಕಾರಿ ಸಮಿತಿ ರಚಿಸಿ, ಆದೇಶ ಹೊರಡಿಸಿದೆ.

ರಾಜೀನಾಮೆ, ಮರಣದಿಂದ ಕೆಲ ಟ್ರಸ್ಟ್‌ಗಳಿಗೆ ವರ್ಷಗಳಿಂದ ಅಧ್ಯಕ್ಷರ ಸ್ಥಾನ ಖಾಲಿಯಿತ್ತು. ಅಧ್ಯಕ್ಷರ ವಯೋಸಹಜ ಅನಾರೋಗ್ಯ ಸಮಸ್ಯೆ, ಜಿಲ್ಲಾಧಿಕಾರಿಗಳಿಗೆ ಹೊಣೆ ಸೇರಿ ವಿವಿಧ ಕಾರಣಗಳಿಂದ ಕೆಲ ಟ್ರಸ್ಟ್‌ಗಳು ನಿಷ್ಕ್ರಿಯವಾಗಿವೆ ಎಂಬ ಆರೋಪಗಳೂ ಸಾಂಸ್ಕೃತಿಕ ವಲಯದಲ್ಲಿದ್ದವು. ಬಹುತೇಕ ಟ್ರಸ್ಟ್‌ಗಳಿಗೆ ಇದೇ ಮೊದಲ ಬಾರಿಗೆ ಪದಾಧಿಕಾರಿಗಳನ್ನು ಬದಲಾಯಿಸಲಾಗಿದೆ. ಶಿವಮೊಗ್ಗದ ರಾಷ್ಟ್ರ ಕವಿ ಕುವೆಂಪು ಪ್ರತಿಷ್ಠಾನ ಸೇರಿ ಮೂರು ಕೇಂದ್ರಗಳಿಗೆ ಪದಾಧಿಕಾರಿಗಳನ್ನು ಬದಲಾಯಿಸಿಲ್ಲ.

ಟ್ರಸ್ಟ್‌, ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಜಾರಿಯಲ್ಲಿ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಟ್ರಸ್ಟ್‌ಗಳ ನೇಮಕಾತಿ ಇಂತಿವೆ

* ಧಾರವಾಡದ ದ.ರಾ.ಬೇಂದ್ರೆ (ಅಂಬಿಕಾತನಯದತ್ತ) ರಾಷ್ಟ್ರೀಯ ಸ್ಮಾರಕ ಟ್ರಸ್ಟ್: ಅಧ್ಯಕ್ಷ: ಮನೋಜ ಪಾಟೀಲ (ಧಾರವಾಡ), ಸದಸ್ಯರು: ಉಮೇಶ ದೂಶಿ, ಶ್ರೀರಾಮ ಭಟ್ಟ, ವೀರಣ್ಣ ರಾಜೂರ, ಅರವಿಂದ ಯಳಗಿ, ಆನಂದಪ್ಪ ಜೋಗಿ, ವೀಣಾ ಕಟ್ಟಿ, ಶುಭಾಶ ಚಂದ್ರ ನಾಟೆಕರ

* ಬೆಂಗಳೂರಿನ ಡಾ.ಪು.ತಿ.ನ. ಟ್ರಸ್ಟ್: ಅಧ್ಯಕ್ಷ: ಎಚ್‌.ಎಸ್‌. ವೆಂಕಟೇಶಮೂರ್ತಿ, ಸದಸ್ಯರು:ಅಭಿಷೇಕ್ ಅಯ್ಯಂಗಾ‌ರ್,ನಂದಾ ಶ್ರೀವತ್ಸ, ಲಾವಣ್ಯಪ್ರಭ,ಎನ್.ಎಸ್. ಶ್ರೀನಾಥ್,ಕ್ರಾಂತಿ ಮಂಜು, ಶ್ರೀರಾಮ ಭಟ್,ಡಿ. ಬಾಲಕೃಷ್ಣ

* ಧಾರವಾಡದಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್: ಅಧ್ಯಕ್ಷ: ನಾಗರಾಜ ಹವಾಲದಾರ, ಸದಸ್ಯರು: ಲಲಿತಾ ಭಂಡಾರಿ, ರೇಣುಕಾ ನಾಕೋಡ,ಶಕ್ತಿ ಪಾಟೀಲ, ಉಸ್ತಾದ್ ರಫೀಕ ಖಾನ್, ನಂದಾ ಪಾಟೀಲ,ಅನಸೂಯಾ ಹಿರೇಮಠ, ನಂದನ್

* ಕೋಲಾರದಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್: ಅಧ್ಯಕ್ಷೆ:ವತ್ಸಲಾ ಮೋಹನ್, ಸದಸ್ಯರು: ಅನಿಲ ಕುಮಾರ್ ಕರ್ಮವೀರ, ಕೃಷ್ಣಮೂರ್ತಿ ಹನೂರು, ಬಿ.ಆರ್. ಲಕ್ಷ್ಮಣರಾವ್‌,ಉಷಾ ಕೇಸರಿ, ಟಿ.ಜಿ. ನರಸಿಂಹಮೂರ್ತಿ, ಅನಂತರಾಮ್, ಆನಂದ್ ಕುಮಾರ್

* ಉಡುಪಿಯಡಾ.ಕೆ. ಶಿವರಾಮ ಕಾರಂತ ಪ್ರತಿಷ್ಠಾನ: ಅಧ್ಯಕ್ಷ: ಆನಂದ ಸಿ. ಕುಂದರ್, ಸದಸ್ಯರು:ಎ.ಎಸ್.ಎನ್. ಹೆಬ್ಬಾರ್,ವಿಠ್ಠಲ ಗಾಂವ್ಕರ್, ನರೇಂದ್ರ ಕೋಟ,ಪೂರ್ಣಿಮಾ ಸುರೇಶ್,ಆನಂದ ಪಿ. ಮುದ್ರಾಡಿ, ಪಾರ್ವತಿ ಜಿ. ಐತಾಳ್, ಮಾಧವಿ ಭಂಡಾರಿ

* ಹಾವೇರಿಯಡಾ.ವಿ.ಕೃ. ಗೋಕಾಕ್ ಪ್ರತಿಷ್ಠಾನ: ಅಧ್ಯಕ್ಷ:ಅನಿಲ್ ಗೋಕಾಕ್, ಸದಸ್ಯರು:ಶ್ರೀಧರ ಹೆಗಡೆ ಭದ್ರನ್,ಎಂ.ಎ. ಸುಬ್ರಮಣ್ಯ,ಎನ್.ಎ. ದಾಮೋದರ ಶೆಟ್ಟಿ,ದಯಾನಂದ ಮಾದರ್,ಕೀರ್ತಿ ನಿಡಗುಂದಿ, ಎನ್.ಎಸ್. ಗುಂಡೂರ,ಮಲ್ಲಿಕಾರ್ಜುನ ಗುಮ್ಮಗೋಳ

* ಧಾರವಾಡದ ಸ್ವರ ಸಾಮ್ರಾಟ್ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್: ಅಧ್ಯಕ್ಷ:ಶ್ರೀಪಾದ ಹೆಗಡೆ, ಸದಸ್ಯರು:ಹನುಮಂತ ಹರಿವಾಣ, ರವೀಂದ್ರ ಯಾವಗಲ, ಪೂರ್ಣಿಮಾ ಭಟ್,ಅರ್ಜುನ ವಥಾರ,ಉಸ್ತಾದ್ ಹಫೀಜ್ ಖಾನ್,ಶಾಂತೇಶ ಚಿಕ್ಕಲಕಿ, ಮೋಹನ್ ರಾಮದುರ್ಗ

* ಧಾರವಾಡದಕನ್ನಡ ಕುಲಪುರೋಹಿತ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌: ಅಧ್ಯಕ್ಷ: ಶ್ರೀನಿವಾಸ ಪಾಡಿಗಾರ, ಹರ್ಷವರ್ಧನ ಶೀಲವಂತ, ಚೆ. ರಾಮಸ್ವಾಮಿ, ನಾಗೇಂದ್ರ ದೊಡ್ಡಮನಿ, ಜಿನದತ್ತ ಹಡಗಲಿ, ಮೃಣಾಲ ಜೋಶಿ, ಧನವಂತ ಹಾಜವಗೋಳ, ಸಿದ್ದರಾಮ ಮಠಪತಿ

* ಬೆಳಗಾವಿಯ ಬೆಟಗೇರಿ ಕೃಷ್ಣಶರ್ಮ ರಾಷ್ಟ್ರೀಯ ಸ್ಮಾರಕ ಟ್ರಸ್ಟ್: ಅಧ್ಯಕ್ಷೆ:ಕವಿತಾ ಕುಸಗಲ್, ಸದಸ್ಯರು: ರಾಮಚಂದ್ರ ಏಡಕೆ, ಪ್ರಜ್ಞಾ ಮತ್ತಿಹಳ್ಳಿ, ವಿಜಯಕುಮಾರ ಕಟಗಿಹಳ್ಳಿಮಠ,ಜ್ಯೋತಿ ಕೂಡ್ಲಗಿ, ಸಿ.ಎಸ್. ಹಲಾವದಾರ, ಸಿ.ಎಸ್. ಆನಂದ,ಅನೂಪ್ ದೇಶಪಾಂಡೆ

* ಹಾವೇರಿಯಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್: ಅಧ್ಯಕ್ಷ: ಸುಧೀರ್ ಸಿಂಹ ಘೋರ್ಪಡೆ, ಸದಸ್ಯರು:ನಿರಂಜನ್ ಪೂಜಾ‌ರ್,ಎಚ್.ಎಸ್. ಮಹಾದೇವಪ್ಪ, ಸುಭಾಷಿಂಗ್ ಜಮಾದಾರ್,ನವೀನ್ ನಾಗಪ್ಪ, ಅಮರೇಶ್ ಯಾತಗಲ್,ಶಶಿಧರ್ ವೈದ್ಯ, ಸುನಂದಾ ಗದಗ್

* ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ: ಅಧ್ಯಕ್ಷ: ಗುರುಪಾದ ಮರಿಗುದ್ದಿ, ಸದಸ್ಯರು:ರಾಜೇಶ ಹೊಂಗಲ್, ವೀಣಾ ಬಿರಾದಾರ, ಶ್ರೀಧರ ಬಾಲಗರ, ಉದಯ ಲಾಡ್, ಸಿದ್ದು ಕಲ್ಯಾಣಶೆಟ್ಟಿ, ಸುನಂದಾ ಹಾಲಭಾವಿ, ಹೇಮಂತ ಭಜಂತ್ರಿ

* ಧಾರವಾಡದ ಚಿತ್ರಕಲಾ ಶಿಲ್ಪಿ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌: ಅಧ್ಯಕ್ಷ: ಪಿ.ಎಸ್‌. ಕಡೆಮನಿ. ಸದಸ್ಯರು: ಬಾಲಪ್ಪ ಗೋಗಿಹಾಳ್‌, ಪ್ರಮೋದ್‌ ಕಾರಕೂನ, ಡಾ. ಶಂಕರ ಕಂದಗೋಳ, ಸುರೇಶ್ ಹಾಲಭಾವಿ, ಸವಿತಾ ಪಾಟೀಲ್‌, ರಾಘವೇಂದ್ರ ಜಾಧವ್‌, ಗುರುಸಿದ್ದಪ್ಪ.

* ಕೋಲಾರದ ಡಾ.ಡಿ.ವಿ.ಜಿ. ಪ್ರತಿಷ್ಠಾನ: ಅಧ್ಯಕ್ಷ: ಎಸ್‌. ದಿವಾಕರ.ಸದಸ್ಯರು: ಎಚ್‌. ರಾಜಕುಮಾರ್‌, ರಾಮಚಂದ್ರ ಹೆಗಡೆ, ಸೂರ್ಯಪ್ರಕಾಶ ಪಂಡಿತ, ಕಮಲಮ್‌ ಅರಸು, ರಾಧಾಕೃಷ್ಣ ಕೌಂಡಿನ್ಯ, ಸಹನಾ ವಿಜಯಕುಮಾರ್‌, ತನ್ಮಯಿ ಪ್ರೇಮಕುಮಾರ್‌.

* ಬಾಗಲಕೋಟೆಯ ಪಿ.ಬಿ. ಧುತ್ತರಗಿ(ಸೂಳಿಬಾವಿ) ಪ್ರತಿಷ್ಠಾನ: ಅಧ್ಯಕ್ಷ: ಶಿವಪ್ಪ ಭರಮಪ್ಪ ಅದರಗುಂಚಿ. ಸದಸ್ಯರು: ಪ್ರಶಾಂತ ಪವಾರ, ಪ್ರಕಾಶ್‌ ಖಾಡೆ, ಗಣೇಶ ಅಮೀನಗಡ, ಶ್ರೀದೇವಿ ದುತ್ತರಗಿ, ಸತೀಶ್‌ ಸುಳ್ಳಿಕೆರೆ, ವೀಣಾ ಅಠವಾಳೆ, ಬಿ.ಆರ್‌. ಪೊಲೀಸ್‌ ಪಾಟೀಲ್‌.

* ಹಾವೇರಿಯ ಗಳಗನಾಥ ಮತ್ತು ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನ: ಅಧ್ಯಕ್ಷ: ಚಕ್ರವರ್ತಿ ಸೂಲಿಬೆಲೆ. ಸದಸ್ಯರು: ಕೆ.ಎನ್‌. ಪಾಟೀಲ್‌, ವಸಂತ ಸುರೇಶ್‌ ರಾಜಪುರೋಹಿತ್, ಓ. ವೆಂಕಟೇಶ್‌ ಬಿಷ್ಟೇಶ್‌ ಗಳಗನಾಥ, ರಘು ವೆಂಕಟಾಚಲಯ್ಯ, ಹರ್ಷಾ ಡಂಬಾಳ, ಡಾ. ಪ್ರಕಾಶ ಕಟ್ಟೀಮನಿ, ಮಹಾಲಕ್ಷ್ಮಿ.

* ಮಂಡ್ಯದ ಕೆ.ಎಸ್‌. ನರಸಿಂಹಸ್ವಾಮಿ ಟ್ರಸ್ಟ್‌: ಅಧ್ಯಕ್ಷ: ಡಾ.ಬಿ.ವಿ. ರಾಜಾರಾಂ. ಸದಸ್ಯರು: ಡಾ.ಎಂ.ಎಸ್‌. ವಿದ್ಯಾ, ಎಂ.ಎನ್‌. ಸುಬ್ರಹ್ಮಣ್ಯ, ಕೆ.ಎನ್‌. ಬದರೀನಾಥ್‌, ಉಪಾಸನಾ ಮೋಹನ್‌, ಡಾ. ಪ್ರದೀಪ್‌ ಕುಮಾರ್‌ ಹೆಬ್ರಿ, ಡಾ. ಉಮೇಶ್‌ ಎಸ್‌.ಎಸ್‌, ಡಾ. ಜ್ಯೋತಿ ಶಂಕರ್‌.

* ಬೆಂಗಳೂರಿನ ಡಾ. ಜಿ.ಎಸ್‌. ಶಿವರುದ್ರಪ್ಪ ಪ್ರತಿಷ್ಠಾನ: ಅಧ್ಯಕ್ಷ: ಡಾ. ಬಸವರಾಜ ಕಲ್ಗುಡಿ. ಸದಸ್ಯರು: ಛಾಯಾ ಭಗವತಿ, ಗೋವಿಂದರಾಜು, ರಮೇಶ್ ದೊಡ್ಡಪುರ, ಎಸ್‌.ಆರ್‌. ಆಂಜನಪ್ಪ, ಲೋಕೇಶ್ ಅಗಸನಕಟ್ಟೆ, ಚಿತ್ರಾ ಸಂತೋಷ್‌, ಜಿ.ಎಸ್‌. ಜಯದೇವ್‌.

*ಚಿಕ್ಕಮಗಳೂರಿನ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ: ಅಧ್ಯಕ್ಷ: ನರೇಂದ್ರ ರೈ ದೇರ್ಲ. ಸದಸ್ಯರು: ಪ್ರಭುಲಿಂಗ ಶಾಸ್ತ್ರಿ, ದೀಪಕ್‌ ದೊಡ್ಡಯ್ಯ, ಶಿವಾನಂದ ಕಳವೆ, ವಿನೋದ ಕುಮಾರ್‌ ನಾಯಕ್‌, ಲಕ್ಷ್ಮೀನಾರಾಯಣ ಕಜಗದ್ದೆ, ಮಾರ್ಷಲ್‌ ಶರಾಮ್‌ ಹಾಗೂ ನಿಧನರಾಗಿರುವ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ.

* ವಿಜಯಪುರದ ಹಲಸಂಗಿ ಗೆಳೆಯರ ಪ್ರತಿಷ್ಠಾನ. ಅಧ್ಯಕ್ಷೆ: ಸರಸ್ವತಿ ಚಿಮ್ಮಲಗಿ. ಸದಸ್ಯರು: ಸಂಗಮೇಶ್‌ ಪೂಜಾರ್‌, ಓಂಕಾರ ಕಾಕಡೆ, ಜಗದೇವ ಗಲಗಲಿ, ಶೈಲಜಾ ಹೂಗಾರ, ಮುತ್ತಣ್ಣ ಬೆನ್ನೂರ್, ಕೃಷ್ಣ ಕೊಲ್ಹಾರ ಕುಲಕರ್ಣಿ, ಶಂಕರ ಮೊಕಾಶಿ.

* ಬಾಗಲಕೋಟೆಯ ಕವಿ ಚಕ್ರವರ್ತಿ ರನ್ನ ಪ್ರತಿಷ್ಠಾನ: ಅಧ್ಯಕ್ಷ: ಡಾ. ನೀಲಗಿರಿ ತಳವಾರ್. ಸದಸ್ಯರು: ಡಿ.ಕೆ. ರಂಗನಾಥ ಮಹಾಲಿಂಗಪುರ, ಡಾ.ನಿಂಗಪ್ಪ ಮುದೇನೂರು, ಶಶಿಕಲಾ ಮೊರಬದ, ವೈ.ಎಂ. ಭಜಂತ್ರಿ, ಡಿ. ಆನಂದಪ್ಪ, ಗೀತಾ ವಸಂತ್‌, ಶಿವಾನಂದ ಮೇಟಿ.

* ತುಮಕೂರಿನ ಡಾ.ಗುಬ್ಬಿ ವೀರಣ್ಣ ಟ್ರಸ್ಟ್‌: ಅಧ್ಯಕ್ಷ: ಡಾ.ಭೀಮಸೇನ್‌. ಸದಸ್ಯರು: ಗುರುಪ್ರಸಾದ್‌ ಟಿ.ಆರ್‌, ದಾಕ್ಷಾಯಿಣಿ ಭಟ್‌, ಶ್ರೀಧರ್‌ ಹೆಗಡೆ, ಎಂ.ಎನ್‌. ನರಸಿಂಹಮೂರ್ತಿ, ಗಣೇಶ್‌ ಶಿಳ್ಳೇಕ್ಯಾತ, ಹರ್ಷ ತಿಪಟೂರು, ಗುಬ್ಬ ಬಸವರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT