ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಟು ಹಿಂತಿರುಗಿಸದಿದ್ದರೆ ದಂಡ ಖಚಿತ: ಡಿಸಿಎಂ

Last Updated 29 ಡಿಸೆಂಬರ್ 2020, 21:05 IST
ಅಕ್ಷರ ಗಾತ್ರ

ರಾಮನಗರ: ‘ಸಿಇಟಿ ಮಾಪ್‌ ಅಪ್‌ ಸುತ್ತಿನಲ್ಲಿ ಸೀಟು ತೆಗೆದುಕೊಳ್ಳದೇ ಇರುವವರಿಗೆ ದಂಡ ಖಚಿತ. ವಿದ್ಯಾರ್ಥಿಗಳಿಗೆ ಅನ್ಯಾಯ ಆಗಬಾರದು ಎನ್ನುವ ಕಾರಣಕ್ಕೇ ಈ ನಿಯಮವನ್ನು ಜಾರಿಗೆತರಲಾಗಿದೆ’ ಎಂದು ಉಪಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ ಸ್ಪಷ್ಟನೆ ನೀಡಿದರು.

ಬೆಂಗಳೂರಿನ ಸಿಇಟಿ ಕಚೇರಿ ಮುಂದೆ ವಿದ್ಯಾರ್ಥಿ– ಪೋಷಕರ ಪ್ರತಿಭಟನೆ ಕುರಿತು ರಾಮನಗರದಲ್ಲಿ ಮಂಗಳವಾರ ಅವರು ಪ್ರತಿಕ್ರಿಯೆ ನೀಡಿದರು.

‘ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರತಿವರ್ಷ ಸೀಟ್‌ ಬ್ಲಾಕಿಂಗ್‌ ಆಗುತ್ತದೆ. ಇದರಿಂದ ನಿಜವಾಗಿ ಸೀಟಿನ ಅಗತ್ಯ ಇರುವವರಿಗೆ ಅನ್ಯಾಯ ಆಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಕಾನೂನಿನಲ್ಲಿ ಸುಧಾರಣೆಗಳನ್ನು ತರಲಾಗಿದೆ. ಅದರಂತೆ ಯಾರೇ ಸೀಟು ಪಡೆದುಕೊಂಡವರು ಪ್ರವೇಶ ಪಡೆಯದೇ ಹೋದಲ್ಲಿ ಸರ್ಕಾರಕ್ಕೆ ಹಿಂತಿರುಗಿಸಲು ಅವಕಾಶ ಇರುತ್ತದೆ. ಮೊದಲ ಸುತ್ತಿನಲ್ಲಿ ಸೀಟು ಪಡೆದವರು ಕಾಲೇಜಿಗೆ ದಾಖಲಾಗದೇ ಹೋದಲ್ಲಿ ಎರಡನೇ ಸುತ್ತಿನ ವೇಳೆ ತಮ್ಮ ಸೀಟನ್ನು ಬೇರೆಯವರಿಗೆ ಬಿಟ್ಟುಕೊಡಬೇಕು. ಅಂತೆಯೇ ಎರಡನೇ ಸುತ್ತಿನಲ್ಲಿ ಪಡೆದವರು ಮಾಪ್‌ ಅಪ್‌ ಸುತ್ತಿಗೆ ಮುಂಚೆ ಸೀಟು ಹಿಂತಿರುಗಿಸಲು ಅವಕಾಶ ಇದೆ. ಆದರೆ ಮಾಪ್ಅಪ್‌ ಸುತ್ತಿನಲ್ಲಿ ಸೀಟು ಪಡೆದುಕೊಂಡವರು ದಾಖಲಾಗಲೇ ಬೇಕು. ಇಲ್ಲವಾದಲ್ಲಿ ದಂಡ ಕಟ್ಟಲೇಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT