₹2000 ನೋಟುಗಳ ಕಣ್ಮರೆ: ಕಪ್ಪು ಹಣಕ್ಕೆ ಬಿಜೆಪಿಯಿಂದ ಸಹಕಾರ?- ಕಾಂಗ್ರೆಸ್

ಬೆಂಗಳೂರು: ಚಲಾವಣೆಯಲ್ಲಿರುವ ₹2000 ನೋಟುಗಳ ಸಂಖ್ಯೆ ಇಳಿಕೆಯ ಕುರಿತ ವರದಿಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ದೇಶದ ಅರ್ಥ ವ್ಯವಸ್ಥೆಯ ಪತನಕ್ಕೆ ನಾಂದಿಯಾಗಿದ್ದ ನೋಟು ರದ್ದತಿಯನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ಹೇಳುತ್ತಿದ್ದ ಕಾರಣ 'ಕಪ್ಪು ಹಣ. ಅವೈಜ್ಞಾನಿಕವಾಗಿ ₹2000 ಮುಖಬೆಲೆಯ ನೋಟುಗಳನ್ನು ಹೊರತಂದು ಮಾಡಿದ ಸಾಧನೆ ಏನು? 'ಕಪ್ಪು ಹಣ' ಕೂಡಿಡುವವರಿಗೆ ಸಹಕಾರವೇ?’ ಎಂದು ಪ್ರಶ್ನಿಸಿದೆ.
‘ಗಣನೀಯ ಪ್ರಮಾಣದಲ್ಲಿ ₹2000 ನೋಟುಗಳು ಚಲಾವಣೆಯಿಂದ ಕಣ್ಮರೆಯಾಗಿವೆ ಎಂದರೆ ಏನರ್ಥ?’ ಎಂದು ಕಾಂಗ್ರೆಸ್ ಕೇಳಿದೆ.
ದೇಶದ ಅರ್ಥ ವ್ಯವಸ್ಥೆಯ ಪತನಕ್ಕೆ ನಾಂದಿಯಾಗಿದ್ದ ನೋಟು ರದ್ದತಿಯನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ಹೇಳುತ್ತಿದ್ದ ಕಾರಣ 'ಕಪ್ಪು ಹಣ'!
ಅವೈಜ್ಞಾನಿಕವಾಗಿ 2000 ಮುಖಬೆಲೆಯ ನೋಟುಗಳನ್ನು ಹೊರತಂದು ಮಾಡಿದ ಸಾಧನೆ ಏನು?
'ಕಪ್ಪು ಹಣ' ಕೂಡಿಡುವವರಿಗೆ ಸಹಕಾರವೇ?ಗಣನೀಯ ಪ್ರಮಾಣದಲ್ಲಿ ₹2000 ನೋಟುಗಳು ಚಲಾವಣೆಯಿಂದ ಕಣ್ಮರೆಯಾಗಿವೆ ಎಂದರೆ ಏನರ್ಥ? pic.twitter.com/rsEqWeOKva
— Karnataka Congress (@INCKarnataka) May 28, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.