ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ರಕ್ಷಣಾ ಇಲಾಖೆಯ ವಸ್ತುಪ್ರದರ್ಶನ

Last Updated 11 ಡಿಸೆಂಬರ್ 2021, 17:31 IST
ಅಕ್ಷರ ಗಾತ್ರ

ಬೆಂಗಳೂರು: ರಕ್ಷಣಾ ಕ್ಷೇತ್ರದ ಉದ್ದಿಮೆಗೆ ಸಂಬಂಧಿಸಿದ ಸರ್ಕಾರಿ ಸಂಸ್ಥೆಗಳು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆಯ ಅಂಗವಾಗಿ ನಗರದಲ್ಲಿ ಒಟ್ಟು ಏಳು ದಿನ ರಕ್ಷಣಾ ಸಾಮಗ್ರಿಗಳ ಪ್ರದರ್ಶನ ಹಮ್ಮಿಕೊಂಡಿವೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಇದೇ 13ರ ಮಧ್ಯಾಹ್ನ 3.15ಕ್ಕೆ ವರ್ಚುವಲ್‌ ವೇದಿಕೆಯ ಮೂಲಕ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.

‘13ರಿಂದ 19ರವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ 5 ಗಂಟೆವರೆಗೆ ನಿಗದಿಯಾಗಿರುವ ಈ ಪ್ರದರ್ಶನ ಸಾರ್ವಜನಿಕರಿಗೆ ಮುಕ್ತವಾಗಿದೆ. ನಾವು ತಯಾರಿಸಿರುವ ವಿಮಾನ, ಹೆಲಿಕಾಪ್ಟರ್‌, ಏರೊ ಎಂಜಿನ್‌ ಸೇರಿದಂತೆ ಇತರ ಪರಿಕರಗಳನ್ನುನಗರದಲ್ಲಿರುವ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನ (ಎಚ್‌ಎಎಲ್‌) ಹೆರಿಟೇಜ್‌ ಸೆಂಟರ್‌ ಮತ್ತು ಅಂತರಿಕ್ಷಯಾನ ವಸ್ತು ಸಂಗ್ರಹಾಲಯಗಳಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ’ ಎಂದು ಎಚ್‌ಎಎಲ್‌ ಪ್ರಕಟಣೆ ತಿಳಿಸಿದೆ.

‘ಜಾಲಹಳ್ಳಿ ಸೇರಿದಂತೆ ನಗರದ 9 ಕೇಂದ್ರಗಳಲ್ಲಿ ರಕ್ಷಣೆ ಸಂಬಂಧಿಸಿದ ಹಾಗೂ ಇತರ ಪರಿಕರಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ’ ಎಂದು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ಹೇಳಿದೆ.

ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ (ಬಿಇಎಂಎಲ್‌) ಕೂಡ ಪ್ರದರ್ಶನ ಆಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT