ಬುಧವಾರ, ಫೆಬ್ರವರಿ 1, 2023
26 °C

ಇತಿಹಾಸ ರಚನೆ: ಪ್ರತ್ಯೇಕ ಶಾಸನ ಸರ್ವೇಕ್ಷಣಾ ಇಲಾಖೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ದೇಶೀಯ ನೆಲೆಯ ಇತಿಹಾಸ ರಚನೆಗೆ ಪ್ರತ್ಯೇಕ ಶಾಸನ ಸರ್ವೇಕ್ಷಣಾ ಇಲಾಖೆ ರಚನೆಯಾಗಬೇಕು’ ಎಂದು ಕನ್ನಡ ಗೆಳೆಯರ ಬಳಗ ಆಗ್ರಹಿಸಿದೆ.

‘ಶಾಸನಗಳು ದೇಶದ ಇತಿಹಾಸ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿವೆ. ಇದಕ್ಕೆ ಸ್ಪಷ್ಟ ನಿದರ್ಶನ ಅಯೋಧ್ಯಾ ಉತ್ಖನನ. ಈ ಉತ್ಖನನದಲ್ಲಿ ದೊರೆತ ಅವಶೇಷ ಮತ್ತು ಶಾಸನವು ವಿಷ್ಣು ದೇವಾಲಯವನ್ನು ಅಧಿಕೃತವಾಗಿ ದೃಢೀಕರಿಸಿತು. ದೇಶದಲ್ಲಿನ ಶಾಸನಗಳಲ್ಲಿ ಶೇ 30ರಷ್ಟು ಮಾತ್ರ ಬೆಳಕಿಗೆ ಬಂದಿವೆ. ದೇಶದ ವಾಸ್ತವ ಇತಿಹಾಸ ಹೊರಬರಬೇಕಾದರೆ ದೇಶದಲ್ಲಿರುವ ಎಲ್ಲ ಶಾಸನಗಳು ಪ್ರಕಟವಾಗಬೇಕು. ಭಾರತೀಯ ಪುರಾತತ್ವ ಸರ್ವೇಕ್ಷಣಾ
ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಶಾಸನ ವಿಭಾಗಕ್ಕೆ ಹಲವು ವರ್ಷಗಳಿಂದ ಶಾಸನತಜ್ಞರ ನೇಮಕಾತಿ ನಡೆದಿಲ್ಲ’ ಎಂದು ಶಾಸನತಜ್ಞ ಡಾ.ಆರ್. ಶೇಷಶಾಸ್ತ್ರಿ ಹಾಗೂ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಬೇಸರ ವ್ಯಕ್ತಪಡಿಸಿದ್ದಾರೆ. 

‘ಪ್ರತ್ಯೇಕವಾದ ಭಾರತೀಯ ಶಾಸನ ಸರ್ವೇಕ್ಷಣಾ ಇಲಾಖೆ ರಚಸಿ, ಶಾಸನಗಳ ಅಧ್ಯಯನ, ಅನ್ವೇಷಣೆ ಮತ್ತು ಪ್ರಕಟಣೆಗೆ
ಆದ್ಯತೆ ನೀಡಬೇಕು. ದೇಶದ ಇತಿಹಾಸ ನಿಂತಿರುವುದೇ ಶಾಸನಗಳ ಮೇಲೆ. ಇತಿಹಾಸದ ವಿವಿಧ ಮಜಲುಗಳನ್ನು ಅಧ್ಯಯನ ನಡೆಸಲು ಶಾಸನಗಳೇ ಆಧಾರಸ್ತಂಭ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು