ಶುಕ್ರವಾರ, ಫೆಬ್ರವರಿ 3, 2023
23 °C

ಅವಧಿ ಮುಗಿದ 16 ಟೋಲ್‌ ರದ್ದತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ರಾಜ್ಯದಾದ್ಯಂತ ವಿವಿಧ ಹೆದ್ದಾರಿಗಳಲ್ಲಿ ಇರುವ 42 ಟೋಲ್‌ಗೇಟ್‌ಗಳ ಪೈಕಿ 16 ಟೋಲ್‌ಗೇಟ್‌ಗಳ ಅವಧಿ ಪೂರ್ಣಗೊಂಡಿದ್ದು, ಅವುಗಳನ್ನು ರದ್ದು ಮಾಡಬೇಕು ಎಂದು ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್‌. ಷಣ್ಮುಖಪ್ಪ ಆಗ್ರಹಿಸಿದರು.

ಭಾನುವಾರ ಇಲ್ಲಿ ನಡೆದ ಲಾರಿ ಮಾಲೀಕರ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

ಹುಬ್ಬಳ್ಳಿಯ ಗಬ್ಬೂರು ಕ್ರಾಸ್‌ ಬಳಿಯ ಟೋಲ್‌ಗೇಟ್‌ ಸಹಿತ 16 ಟೋಲ್‌ಗೇಟ್‌ಅವಧಿ ಮುಗಿದಿದೆ. ಹೆದ್ದಾರಿ ನಿರ್ಮಾಣಕ್ಕೆ ಖರ್ಚು ಮಾಡಿದ ಹತ್ತುಪಟ್ಟು ಹಣ ವಸೂಲಾಗಿದೆ ಎಂದು ಹೇಳಿದರು.

ಚಿತ್ರದುರ್ಗ–ಹೊಸಪೇಟೆ ನಡುವಿನ ಹೆದ್ದಾರಿಯಲ್ಲಿ 30 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಮೂರುಟೋಲ್‌ಗೇಟ್‌ಗಳಿವೆ. ಒಂದು ಟೋಲ್‌ಗೇಟ್‌ ಇಟ್ಟುಕೊಂಡು ಎರಡನ್ನು ರದ್ದು ಮಾಡಬೇಕು. ಎಲ್ಲ ಟೋಲ್‌ಗೇಟ್‌ಗಳಲ್ಲಿ ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ಸರಕು ಸಾಗಣೆ ಮಾಡುವಾಗಸುಂಕ ವಸೂಲಿ ಮಾಡಬಾರದು. ಸರಕು ಅನ್‌ಲೋಡ್‌ ಮಾಡಿ ವಾಪಸ್‌ ಖಾಲಿ ಬರುವ ಲಾರಿಗಳಿಗೆ ಟೋಲ್‌ ವಿಧಿಸಬಾರದು ಎಂದು ಅವರು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು