ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಡೆಂಗಿ ಪೀಡಿತರ ಸಂಖ್ಯೆ ಹೆಚ್ಚಳ: ವಾರದಲ್ಲಿ 65 ಪ್ರಕರಣಗಳು ದೃಢ

Last Updated 8 ಏಪ್ರಿಲ್ 2022, 16:20 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯದಲ್ಲಿಡೆಂಗಿಪ್ರಕರಣಗಳು ಏರುಗತಿ ಪಡೆದುಕೊಂಡಿದ್ದು, ವಾರದಲ್ಲಿ 65 ಪ್ರಕರಣಗಳು ದೃಢಪಟ್ಟಿವೆ. 22 ಜಿಲ್ಲೆಗಳಲ್ಲಿ ಡೆಂಗಿ ಪೀಡಿತರ ಸಂಖ್ಯೆ ಎರಡಂಕಿಯಲ್ಲಿದೆ.

ಈವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 989 ಕ್ಕೆ ತಲುಪಿದೆ.ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಡೆಂಗಿಪ್ರಕರಣಗಳು ಪತ್ತೆಯಾಗಿವೆ.ಬಿಬಿಎಂಪಿ ವ್ಯಾಪ್ತಿಯಲ್ಲಿ 205 ಮಂದಿಡೆಂಗಿಜ್ವರಕ್ಕೆ ಒಳಗಾಗಿದ್ದಾರೆ. ಈ ವರ್ಷ ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ.2021ರಲ್ಲಿ 7,189 ಮಂದಿಡೆಂಗಿಪೀಡಿತರಾಗಿದ್ದರು. ಅವರಲ್ಲಿ ಐವರು ಮೃತಪಟ್ಟಿದ್ದರು.

ಮೈಸೂರಿನಲ್ಲಿ 93,ಉಡುಪಿಯಲ್ಲಿ 75, ಚಿತ್ರದುರ್ಗ ಹಾಗೂ ಬಳ್ಳಾರಿಯಲ್ಲಿ 68, ಕೊಪ್ಪಳದಲ್ಲಿ 65, ಶಿವಮೊಗ್ಗದಲ್ಲಿ 43, ವಿಜಯಪುರದಲ್ಲಿ 37, ಕೋಲಾರದಲ್ಲಿ 33, ದಕ್ಷಿಣ ಕನ್ನಡದಲ್ಲಿ 30, ರಾಯಚೂರಿನಲ್ಲಿ 28, ತುಮಕೂರಿನಲ್ಲಿ 26 ಹಾಗೂ ಯಾದಗಿರಿಯಲ್ಲಿ 24 ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 20ಕ್ಕಿಂತ ಕಡಿಮೆ ಇವೆ.

23 ಜಿಲ್ಲೆಗಳಲ್ಲಿಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿದ್ದು,270 ಮಂದಿ ಈ ಜ್ವರಕ್ಕೆ ಒಳಗಾಗಿದ್ದಾರೆ. ಕೋಲಾರಹಾಗೂ ವಿಜಯಪುರದಲ್ಲಿ ತಲಾ 52,ಬೆಂಗಳೂರು ಗ್ರಾಮಾಂತರದಲ್ಲಿ 34,ತುಮಕೂರಿನಲ್ಲಿ 29,ಚಿತ್ರದುರ್ಗದಲ್ಲಿ 17 ಹಾಗೂ ದಾವಣಗೆರೆಯಲ್ಲಿ 14 ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 10ಕ್ಕಿಂತ ಕಡಿಮೆ ಇವೆ.

‘ಕಳೆದ ವರ್ಷಡೆಂಗಿಜ್ವರ ನಿಯಂತ್ರಣದಲ್ಲಿತ್ತು. ಈಗ ಕೆಲವರಲ್ಲಿ ಈ ಜ್ವರ ಕಾಣಿಸಿಕೊಳ್ಳುತ್ತಿದೆ. ಅಕಾಲಿಕ ಮಳೆಯಿಂದ ಈ ಜ್ವರ ಹೆಚ್ಚುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT