ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ: 10 ದಿನಗಳಲ್ಲಿ 491 ಪ್ರಕರಣ

Last Updated 6 ಜುಲೈ 2022, 16:16 IST
ಅಕ್ಷರ ಗಾತ್ರ

ಬೆಂಗಳೂರು: ಮಳೆಯಿಂದಾಗಿ ರಾಜ್ಯದಲ್ಲಿ ಡೆಂಗಿ ಪ್ರಕರಣಗಳು ಮತ್ತಷ್ಟು ಹೆಚ್ಚಳವಾಗಿದೆ. 10 ದಿನಗಳಲ್ಲಿ 491 ಮಂದಿ ಈ ಜ್ವರದಿಂದ ಬಳಲಿದ್ದಾರೆ.

ರಾಜ್ಯದಲ್ಲಿಈವರೆಗೆ ಡೆಂಗಿ ಜ್ವರಕ್ಕೆ ಒಳಪಟ್ಟವರ ಒಟ್ಟು ಸಂಖ್ಯೆ 2,741ಕ್ಕೆ ಏರಿಕೆಯಾಗಿದೆ.ಈ ವರ್ಷ 48,219 ಡೆಂಗಿಶಂಕಿತರನ್ನು ಗುರುತಿಸಿ,ತಪಾಸಣೆಗೆ ಒಳಪಡಿಸಲಾಗಿದೆ. 22,280 ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 15,502 ಮಂದಿಯಲ್ಲಿಡೆಂಗಿಶಂಕೆ ವ್ಯಕ್ತವಾಗಿದ್ದು, 388 ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ. ಈ ವರ್ಷಡೆಂಗಿಜ್ವರಕ್ಕೆ ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ.2021ರಲ್ಲಿ 7,189 ಮಂದಿಡೆಂಗಿಪೀಡಿತರಾಗಿದ್ದರು. ಅವರಲ್ಲಿ ಐವರುಮೃತಪಟ್ಟಿದ್ದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಡೆಂಗಿಪ್ರಕರಣಗಳು ಪತ್ತೆಯಾಗಿವೆ.ಪ್ರಕರಣಗಳ ಸಂಖ್ಯೆ ಏಳು ಜಿಲ್ಲೆಗಳಲ್ಲಿ ಮೂರಂಕಿ, 22 ಜಿಲ್ಲೆಗಳಲ್ಲಿ ಎರಡಂಕಿಯಲ್ಲಿದೆ.ಉಡುಪಿಯಲ್ಲಿ 308, ಮೈಸೂರಿನಲ್ಲಿ 296,ದಕ್ಷಿಣ ಕನ್ನಡದಲ್ಲಿ 163,ಶಿವಮೊಗ್ಗದಲ್ಲಿ 144, ಚಿತ್ರದುರ್ಗದಲ್ಲಿ 136,ವಿಜಯಪುರದಲ್ಲಿ 106 ಹಾಗೂ ಹಾಸನದಲ್ಲಿ 102 ಪ್ರಕರಣಗಳು ದೃಢಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ಕ್ಕಿಂತ ಕಡಿಮೆ ಇವೆ.

27 ಜಿಲ್ಲೆಗಳಲ್ಲಿಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ.17 ಸಾವಿರಕ್ಕೂ ಅಧಿಕ ಮಂದಿಚಿಕೂನ್‌ಗುನ್ಯಾ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 10 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ658 ಮಂದಿ ಈ ಜ್ವರಕ್ಕೆ ಒಳಗಾಗಿರುವುದು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT