ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಆಶಯ ಈಡೇರಿಕೆಗೂ ಕಮಿಷನ್ ಬೇಕಾ?: ಎಚ್.ಸಿ. ಮಹದೇವಪ್ಪ

Last Updated 1 ಡಿಸೆಂಬರ್ 2022, 19:04 IST
ಅಕ್ಷರ ಗಾತ್ರ

ಬೆಂಗಳೂರು: ಸಂವಿಧಾನ ಪ್ರತಿಪಾದಿ ಸಿರುವ ಸಾಮಾಜಿಕ ನ್ಯಾಯದ ಆಶಯಗಳನ್ನು ಈಡೇರಿಸುವುದಕ್ಕೂ ಬಿಜೆಪಿ ಯವರಿಗೆ ಶೇ 40 ಕಮಿಷನ್ ನೀಡಬೇಕೇ ಎಂದು ಕಾಂಗ್ರೆಸ್ ಮುಖಂಡ ಎಚ್.ಸಿ. ಮಹದೇವಪ್ಪ ಪ್ರಶ್ನಿಸಿದ್ದಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ಗಳನ್ನು ಕೇಂದ್ರ ಸರ್ಕಾರ ನಿಲ್ಲಿಸಿದೆ. ಶಿಕ್ಷಣ ಪಡೆಯುವುದಕ್ಕಾಗಿ ಕಷ್ಟ ಪಡುತ್ತಿರುವ ವಿದ್ಯಾ
ರ್ಥಿಗಳ ಬದುಕಿನ ಪರಿಚಯವೇ ಕೇಂದ್ರ ಕ್ಕೆ ಇದ್ದಂತಿಲ್ಲ ಎಂದು ಟೀಕಿಸಿದ್ದಾರೆ.

ಸಂಶೋಧನಾ ವಿಭಾಗದ ವಿದ್ಯಾರ್ಥಿಗಳಿಗೂ ಸರಿಯಾಗಿ ಸ್ಕಾಲರ್‌ಶಿಪ್ ನೀಡದೇ ಅವರ ಶೈಕ್ಷಣಿಕ ಬದುಕಿಗೆ ತೊಂದರೆ ಮಾಡಲಾಗುತ್ತಿದೆ. ಅವರ ಹಕ್ಕಿಗೆ ಅನುಗುಣವಾಗಿ ಸಲ್ಲಬೇಕಾದ ವಿದ್ಯಾರ್ಥಿ ವೇತನವನ್ನು ಸರ್ಕಾರ ಕೂಡ ಲೇ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿಗರೇ, ಸಂವಿಧಾನ ದಿನಾಚರಣೆ ಮಾಡುವ ಮೂಲಕ ಬರೀ ಪ್ರಚಾರ ಪಡೆದರೆ ಸಾಲದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT