ಸೋಮವಾರ, ಮಾರ್ಚ್ 1, 2021
17 °C
ಧಾರವಾಡ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ 2ಸಾವಿರ ಡೆಸ್ಕ್‌

ಜೋಶಿ ಕೊಡುಗೆ ಸ್ಮರಿಸಿದ ದೊರೆಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ 2 ಸಾವಿರ ಡೆಸ್ಕ್‌ ಗಳನ್ನು ನೀಡಿರುವುದು ಉಪಯುಕ್ತ’ ಎಂದು ಶಿಕ್ಷಣ ಸುಧಾ ರಣೆಗಳ ಸಲಹೆಗಾರ ಪ್ರೊ. ಎಂ.ಆರ್.ದೊರೆಸ್ವಾಮಿ ಅಭಿ ಪ್ರಾಯಪಟ್ಟಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ರಾಜ್ಯ ಸರ್ಕಾರವು ಈಚೆಗೆ ಜಾರಿಗೆ ತಂದ ದತ್ತು ಯೋಜನೆಯಿಂದಾಗಿ, ಸರ್ಕಾರಿ ಶಾಲೆಗಳ ಸುಧಾರಣೆಗೆ ಅನುಕೂಲವಾಗಿದೆ. ಈ ಯೋಜನೆಯು ಶಿಕ್ಷಣ ಸುಧಾರಣೆಯಲ್ಲಿ ಗಮನಾರ್ಹ ಪರಿಣಾಮ ಬೀರಿದೆ. ರಾಜ್ಯದ 48 ಸಾವಿರಕ್ಕೂ ಅಧಿಕ ಶಾಲೆಗಳಿಗೆ ಇಂಥ ಮೂಲಸೌಕರ್ಯಗಳ ಅಗತ್ಯವಿದೆ’ ಎಂದಿದ್ದಾರೆ.

‘ಪ್ರತಿಯೊಬ್ಬ ಜನಪ್ರತಿನಿಧಿ 10 ಶಾಲೆ ಗಳನ್ನು ದತ್ತು ಪಡೆದಿದ್ದಾರೆ. ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಪರಿಹಾರ ಯೋಜನೆ ಮೂಲಕ ಗ್ರಾಮೀಣಾಭಿವೃದ್ಧಿ ಇಲಾಖೆಗೆ ನೆರವಾಗಲಿದ್ದಾರೆ.  ಜೋಶಿ ಅವರು ಶಾಲೆಗಳಿಗೆ ಡೆಸ್ಕ್ ಕೊಡಿಸುವುದರ ಜತೆಯಲ್ಲೇ ಕಂಪನಿಗಳು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿಯೂ ಸರ್ಕಾರಿ ಶಾಲಾಭಿವೃದ್ಧಿಗೆ ಕೊಡುಗೆ ನೀಡಿ ದ್ದಾರೆ’ ಎಂದು ಅವರು ಸ್ಮರಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.