ಶನಿವಾರ, ಮೇ 15, 2021
29 °C

ಅಕ್ಷಯ ಪಂಡಿತ್‌ಗೆ ‘ಈ ಹೊತ್ತಿಗೆ ಪ್ರಶಸ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಾಗರದ ಅಕ್ಷಯ ಪಂಡಿತ್ ಅವರ ‘ಬಯಲಲಿ ತೇಲುತ ತಾನು’ ಅಪ್ರಕಟಿತ ಕಥಾ ಸಂಕಲನವು ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ಗೆ ಆಯ್ಕೆಯಾಗಿದೆ.

ಈ ಪ್ರಶಸ್ತಿಯು ₹ 10 ಸಾವಿರ ಹಾಗೂ ಫಲಕವನ್ನು ಒಳಗೊಂಡಿದೆ. ವಿಮರ್ಶಕ ಡಾ.ಓ.ಎಲ್‌. ನಾಗಭೂಷಣಸ್ವಾಮಿ ಅವರು ಪ್ರಶಸ್ತಿ ಆಯ್ಕೆಗೆ ತೀರ್ಪುಗಾರರಾಗಿದ್ದರು. 26 ವಯೋಮಿತಿ ಒಳಗಿನವರಿಗೆ ಆಯೋಜಿಸಿದ ಕಥಾ ಸ್ಪರ್ಧೆಗೆ ಯೋಗ್ಯವಾದ ಕಥೆಗಳು ಬರದ ಕಾರಣ ಬಹುಮಾನವನ್ನು ನೀಡುತ್ತಿಲ್ಲ. ಇದಕ್ಕೆ ಪರ್ಯಾಯವಾಗಿ ಮುಂದಿನ ದಿನಗಳಲ್ಲಿ ಎರಡು ದಿನಗಳ ಆನ್‌ಲೈನ್ ಕಥಾ ಕಮ್ಮಟವನ್ನು ಏರ್ಪಡಿಸಲಾಗುತ್ತದೆ. ಈ ವರ್ಷ ಸ್ಪರ್ಧೆಯಲ್ಲಿ ಭಾಗವಹಿಸಿದ ಕಥೆಗಾರರಿಗೆ ಉಚಿತ ಪ್ರವೇಶ ನೀಡುವ ಮೂಲಕ ಅಗತ್ಯ ಮಾರ್ಗದರ್ಶನ ಒದಗಿಸಲಾಗುತ್ತದೆ. ಈ ಮೂಲಕ ಪ್ರೋತ್ಸಾಹಿಸಲಾಗುತ್ತದೆ. ಸಾಹಿತಿ ಚಿದಂಬರ ನರೇಂದ್ರ ಅವರು ಈ ವಿಭಾಗದ ತೀರ್ಪುಗಾರರಾಗಿದ್ದರು ಎಂದು ಈ ಹೊತ್ತಿಗೆಯ ವ್ಯವಸ್ಥಾಪಕ ಟ್ರಸ್ಟಿ ಜಯಲಕ್ಷ್ಮೀ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರಿನ ಜೆ.ಪಿ.ನಗರದ ಕಪ್ಪಣ್ಣ ಅಂಗಳ ಸಭಾಂಗಣದಲ್ಲಿ ಮೇ 1ರಂದು ಹೊನಲು ಕಾರ್ಯಕ್ರಮ ನಡೆಯಲಿದ್ದು, ಅಂದೇ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು