ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಪರಿಚಯ ನಾವು ಬರೆದಿಲ್ಲ: ಬರಗೂರು ರಾಮಚಂದ್ರಪ್ಪ

Last Updated 25 ಮೇ 2022, 20:10 IST
ಅಕ್ಷರ ಗಾತ್ರ

ಬೆಂಗಳೂರು: ’ನಾಲ್ಕನೇ ತರಗತಿಯ ಪರಿಸರ ಅಧ್ಯಯನ ಪಠ್ಯಕ್ರಮದಲ್ಲಿ ಕುವೆಂಪು ಅವರ ಕುರಿತ ಪರಿಚಯವು ಪಠ್ಯಪುಸ್ತಕದ ಮೂಲ ರಚನೆಯ ಸಂದರ್ಭದಲ್ಲೇ ಬರೆಯಲಾಗಿದೆ’ ಎಂದು ಸಾಹಿತಿ ಹಾಗೂ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪ ಸ್ಪಷ್ಟಪಡಿಸಿದ್ದಾರೆ.

‘ಪಠ್ಯಕ್ರಮದಲ್ಲಿರುವ ಕುವೆಂಪು ಅವರ ಕುರಿತ ಪರಿಚಯವನ್ನು ನನ್ನ ನೇತೃತ್ವದ ಸಮಿತಿಯು ಬರೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಪರಿಚಯವು ಪಠ್ಯಪುಸ್ತಕದ ಮೂಲ ರಚನೆಯಲ್ಲಿ ಬರೆಯಲಾಗಿದೆ. ನಮ್ಮ ಕಾಲದ ಪರಿಷ್ಕರಣೆಯಲ್ಲಿ ಬರೆದದ್ದಲ್ಲ. ಇಷ್ಟಕ್ಕೂ ಕುವೆಂಪು ಅವರ ‘ಮನುಜ ಮತ ವಿಶ್ವಪಥ’ ಸಂದೇಶದ ಬೆಳಕಿನಲ್ಲಿ ಸಾಗುತ್ತಿರುವ ನಾನು ಮತ್ತು ನನ್ನಂಥವರು ಅವರ ಅಪೂರ್ವ ಸಾಧನೆಯನ್ನು ಸ್ವಲ್ಪವೂ ಕಡೆಗಣಿಸಲು ಸಾಧ್ಯವೇ ಇಲ್ಲ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಪಠ್ಯಪುಸ್ತಕಗಳ ವಿಷಯದಲ್ಲಿ ಈಗ ನಡೆಯುತ್ತಿರುವ ವಿವಾದಕ್ಕೆ ತೆರೆ ಎಳೆಯಲು ಮುಖ್ಯಮಂತ್ರಿ ಅವರು ಮಧ್ಯಪ್ರವೇಶಿಸಬೇಕು. ವಿದ್ಯಾರ್ಥಿಗಳು ಮತ್ತು ಪೋಷಕರಲ್ಲದೆ ಸಾರ್ವಜನಿಕರಲ್ಲಿ ಶಿಕ್ಷಣ ಕ್ಷೇತ್ರದ ಬಗ್ಗೆ ಅಪನಂಬಿಕೆ ಮೂಡದಂತೆ ನೋಡಿಕೊಳ್ಳಬೇಕು’ ಎಂದು ಕೋರಿದ್ದಾರೆ.

ಕುವೆಂಪು ಪರಿಚಯ: ಈ ಪಠ್ಯದಲ್ಲಿ ಕೃತಿಕಾರರ ಪರಿಚಯ ಶೀರ್ಷಿಕೆ ಅಡಿಯಲ್ಲಿ ಕುವೆಂಪು ಅವರ ವ್ಯಕ್ತಿತ್ವ, ಸಾಹಿತ್ಯ ಮತ್ತು ಸಾಧನೆಯನ್ನು ಪರಿಚಯ ಮಾಡುವ ಪ್ರಯತ್ನ ಮಾಡಲಾಗಿದೆ.

ಕುವೆಂಪು ಅವರ ರಚಿಸಿರುವ ಪ್ರಮುಖ ಕೃತಿಗಳು, ಪ್ರಮುಖ ಪ್ರಶಸ್ತಿಗಳು ಹಾಗೂ 1992ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿರುವುದನ್ನು ಉಲ್ಲೇಖಿಸಲಾಗಿದೆ. ಕುವೆಂಪು ಅವರ ಪಕ್ಷಿಕಾಶಿ ಕವನ ಸಂಕಲನದಿಂದ ಪದ್ಯಭಾಗವನ್ನು ಆಯ್ದುಕೊಂಡಿರುವುದನ್ನು ಸಹ ಈ ಪಠ್ಯದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT